ನಿರಂತರ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ : ಡಾ.ಮಹಾಬಲ

Published Date : Tuesday, 26-06-2018

ನಿರಂತರ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ : ಡಾ.ಮಹಾಬಲ

ಪುತ್ತೂರು: ಮನಸ್ಸಿನ ಸ್ಥಿರತೆ, ದೇಹದ ದೃಢತೆ, ಒಳ್ಳೆಯ ಆರೋಗ್ಯ ಹಾಗೂ ದೀರ್ಘ ಆಯಸ್ಸಿಗಾಗಿ ಯೋಗ ಅಗತ್ಯ. ಆದರೆ ಕೇವಲ ಒಂದು ದಿನದ ಯೋಗಾಭ್ಯಾಸದಿಂದ ಯಾವುದೇ ಪರಿಣಾಮವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಬದಲಾಗಿ ದಿನನಿತ್ಯ ಅದನ್ನು ಆಚರಿಸುವುದರಿಂದ ದೇಹದಲ್ಲಿ ಒಳ್ಳೆಯ ಪರಿವರ್ತನೆಯನ್ನು ಗುರುತಿಸಬಹುದು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಯೋಗ ನಿರ್ದೇಶಕ ಡಾ.ಮಹಾಬಲ ಪುಣ್ಚಿತ್ತೋಡಿ ಹೇಳಿದರು. ಅವರು ವಿಶ್ವಯೋಗ ದಿನಾಚರಣೆಯ ಅಂಗವಾಗಿ ಗುರುವಾರ ಕಾಲೇಜಿನ ಐಕ್ಯುಎಸಿ ಘಟಕದ ವತಿಯಿಂದ  ಕಾಲೇಜಿನ ಉದ್ಯೋಗಿಗಳಿಗಾಗಿ ಆಯೋಜಿಸಲಾದ ಉಪನ್ಯಾಸ ಹಾಗೂ ಯೋಗಾಭ್ಯಾಸ […]

Read More

ವಿವೇಕಾನಂದ ಕಾಲೇಜಿನಲ್ಲಿ ಐಟಿ ಫೆಸ್ಟ್ ಟೆಕ್ನೋ ತರಂಗ್ ಉದ್ಘಾಟನೆ

Published Date : Thursday, 01-02-2018

ವಿವೇಕಾನಂದ ಕಾಲೇಜಿನಲ್ಲಿ ಐಟಿ ಫೆಸ್ಟ್ ಟೆಕ್ನೋ ತರಂಗ್ ಉದ್ಘಾಟನೆ

ಪುತ್ತೂರು: ಅಮೇರಿಕಾದ ಅರ್ಥವ್ಯವಸ್ಥೆಗೆ 28 ಶೇಕಡಾ ಭಾರತೀಯ ಮೂಲದ ಇಂಜಿನಿಯರುಗಳ ಕೊಡುಗೆ ಇದೆ.. ಈಗ ಎಚ್. 1 ವೀಸಾವನ್ನು ನಿರಾಕರಿಸುವ ಹಿನ್ನೆಲೆಯಲ್ಲಿ ಅಲ್ಲಿ ಚರ್ಚೆ ನಡೆಯುತ್ತಿದೆ. ಅದು ಪ್ರಾಯೋಗಿಕವಾಗಿ ಜಾರಿಗೊಂಡರೆ ಅಲ್ಲಿರುವ ಭಾರತೀಯರು ಮರಳಿ ನಮ್ಮ ದೇಶಕ್ಕೆ ಬರಬೇಕಾಗುತ್ತದೆ. ಹಾಗಾದಾಗ ಉದ್ಯೋಗ ಮಾರುಕಟ್ಟೆಯಲ್ಲಿ ಹೊಸಬರಿಗೆ ಸಾಕಷ್ಟು ಸವಾಲು ಎದುರಾಗಲಿದೆ  ಎಂದು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಸುಧೀರ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಕಂಪ್ಯೂಟರ್ […]

Read More

ಭಾರತದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಶೇಷ ಮನ್ನಣೆ : ಜಯರಾಮ ಭಟ್

Published Date : Monday, 29-01-2018

ಭಾರತದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಶೇಷ ಮನ್ನಣೆ : ಜಯರಾಮ ಭಟ್

ಪುತ್ತೂರು: ಭಾರತ ದೇಶದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಶೇಷ ಮನ್ನಣೆ ನೀಡಲಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಆಸ್ತಿ ಹಕ್ಕು, ಶೋಷಣೆ ವಿರುದ್ಧದ ಹಕ್ಕು ಹೀಗೆ ನಾನಾ ಹಕ್ಕುಗಳೂ ದಕ್ಕುತ್ತಿವೆ. ಇಂತಹ ವಿಶಿಷ್ಟ ಆಷ್ಟ್ರದ ಪ್ರಜೆಗಳಾಗಿರುವುದು ನಮ್ಮ ಹೆಮ್ಮೆ. ಸ್ವಾತಮತ್ರ್ಯಾ ನಂತರದಲ್ಲಿ ರಚಿತವಾದ ಸಂವಿಧಾನ ನಮಗೆ ವಿಶೇಷವಾದ ಸ್ಥಾನವನ್ನು ಕಲ್ಪಿಸಿದೆ ಎಂದು ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಲಾದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಿ ದ್ವಜಾರೋಹಣಗೈದು ಶುಕ್ರವಾರ ಮಾತನಾಡಿದರು. […]

Read More

ಪ್ರತಿ ಘಟನೆಯೂ ಒಂದೊಂದು ಪಾಠ : ಹರೀಶ್ ಶಾಸ್ತ್ರಿ

Published Date : Monday, 29-01-2018

ಪ್ರತಿ ಘಟನೆಯೂ ಒಂದೊಂದು ಪಾಠ : ಹರೀಶ್ ಶಾಸ್ತ್ರಿ

ಪುತ್ತೂರು: ನಮ್ಮ ಪರಿಸರವೇ ನಮಗೆ ನಿಜವಾದ ಗುರು. ಪರಿಸರದಲ್ಲಿನ ಪ್ರತಿಯೊಂದು ಘಟನೆಯೂ ನಮ್ಮ ಕಲಿಕೆಗೆ ಪೂರಕ. ಅದಕ್ಕಾಗಿ ಸಿಗುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಪಡಿಸಿಕೊಳ್ಳಬೇಕು. ಸೋಲೇ ಗೆಲುವಿನ ಸೋಪಾನ. ಸ್ಪರ್ಧೆಗಳು ಅವಕಾಶವನ್ನು ಕೊಡುತ್ತದೆ. ಅವಕಾಶ ಅನುಭವವನ್ನು ಕೊಡುತ್ತದೆ ಎಂದು ಹರೀಶ್ ಶಾಸ್ತ್ರಿ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಅಂತಿಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಆಯೋಜಿಸುವ ವಿಜ್ಞಾನ ಹಬ್ಬ eureka 2018 ವಿಜ್ಞಾನ ಸ್ವರ’ದ ಸ್ಪರ್ಧೆಗಳನ್ನು ಉದ್ಘಾಟಿಸಿ […]

Read More

ವಿವೇಕಾನಂದ ಪತ್ರಿಕೋದ್ಯಮದಲ್ಲಿ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ – ಕಸ ಎಸೆಯದಿರುವ ಪ್ರತಿಜ್ಞೆ ಮಾಡೋಣ : ನವೀನ್ ಡಿ ಪಡೀಲ್

Published Date : Tuesday, 23-01-2018

ವಿವೇಕಾನಂದ ಪತ್ರಿಕೋದ್ಯಮದಲ್ಲಿ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ - ಕಸ ಎಸೆಯದಿರುವ ಪ್ರತಿಜ್ಞೆ ಮಾಡೋಣ : ನವೀನ್ ಡಿ ಪಡೀಲ್

ಪುತ್ತೂರು: ಸ್ವಚ್ಛ ಭಾರತ ಎಂಬುವುದು ಎಲ್ಲರ ಕನಸು. ಅದಕ್ಕೆ ಬದಲಾವಣೆಯ ಅಗತ್ಯತೆ ಇದೆ. ಆ ಬದಲಾವಣೆ ಮೊದಲು ನಮ್ಮೊಳಗೆ ಹುಟ್ಟಬೇಕು. ಕಸವನ್ನು ಹೆಕ್ಕುವುದಕ್ಕಿಂತ ಎಲ್ಲೆಂದರಲ್ಲಿ ಕಸ ಬಿಸಾಡಲಾರೆ ಎಂಬ ನಿರ್ಧಾರ ಮಾಡುವ ಅಗತ್ಯತೆ ಇದೆ. ನಿಸರ್ಗ ದೇವರಿತ್ತ ಸಂಪತ್ತು. ಅವುಗಳನ್ನು ಸುಂದರವಾಗಿ, ಸ್ವಚ್ಛವಾಗಿರಿಸಿಕೊಳ್ಳುತ್ತೇವೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ತನ್ನ ಕರ್ತವ್ಯವನ್ನು ನಿರ್ವಹಿಸಿದಾಗ ಮಾತ್ರ ಉನ್ನತಿಯತ್ತ ಸಾಗಲು ಸಾಧ್ಯವಿದೆ ಎಂದು ತುಳು ಚಿತ್ರರಂಗದ ಖ್ಯಾತ ಕಲಾವಿದ ಕುಸಲ್ದರಸೆ ನವೀನ್ ಡಿ. ಪಡೀಲ್ ಹೇಳಿದರು. […]

Read More

ವಿವೇಕಾನಂದದಲ್ಲಿ ಭಗವದ್ಗೀತ ಭಗವದರ್ಪಣಂ ಕಾರ್ಯಕ್ರಮ

Published Date : Tuesday, 23-01-2018

ವಿವೇಕಾನಂದದಲ್ಲಿ ಭಗವದ್ಗೀತ ಭಗವದರ್ಪಣಂ ಕಾರ್ಯಕ್ರಮ

ಪುತ್ತೂರು :   ಭಗವದ್ಗೀತೆ ಜಗತ್ತಿನಲ್ಲೆ ಅತ್ಯಂತ ಸಣ್ಣ ಧಾರ್ಮಿಕ ಗ್ರಂಥ ಎಂಬ ಪ್ರಶಂಸೆಗೆ ಪಾತ್ರವಾಗಿದೆ.  ಆದರೆ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತೆ, ಭಗವದ್ಗೀತೆಯಲ್ಲಿ ಅಡಕವಾಗಿರುವ ಜ್ಞಾನರಾಶಿ ಅಪಾರವಾದುದು ಎಂದು ಬೆಟ್ಟಂಪಾಡಿಯ ಸಂಸ್ಕೃತ ವಿದ್ವಾಂಸ ವೆಂಕಟರಮಣ ಭಟ್ ಮಂಜಳಗಿರಿ ನುಡಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ಸಂಘ ವಿಕಾಸಂ ನ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಶ್ರೀಮದ್ಭಗವದ್ಗೀತ ಭಗವದರ್ಪಣ ಕಾರ್ಯಕ್ರಮದಲ್ಲಿ ಶುಕ್ರವಾರ ಭಗವದ್ಗೀತೆಯ ಮಹತ್ತ್ವದ ಕುರಿತು ಮಾತನಾಡಿದರು. ವೇದ ಹಾಗೂ ಉಪನಿಷತ್ತುಗನ್ನು ಅರ್ಥೈಸಿಕೊಳ್ಳಲು ಜನಸಾಮಾನ್ಯರಿಗೆ ಅಸಾದ್ಯವಾದಾಗ ಈ ಭಗವದ್ಗೀತೆಯು […]

Read More

ವಿವೇಕಾನಂದ ವಾಣಿಜ್ಯ ವಿಭಾಗದ ಇಬ್ಬರು ಸಿ.ಪಿ.ಟಿ ಪರೀಕ್ಷೆಯಲ್ಲಿ ತೇರ್ಗಡೆ

Published Date : Tuesday, 23-01-2018

ವಿವೇಕಾನಂದ ವಾಣಿಜ್ಯ ವಿಭಾಗದ ಇಬ್ಬರು ಸಿ.ಪಿ.ಟಿ ಪರೀಕ್ಷೆಯಲ್ಲಿ ತೇರ್ಗಡೆ

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಸಿ.ಎ ಹುದ್ದೆಯ ಆರಂಭಿಕ ಹಂತವಾದ ಸಿ.ಪಿ.ಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ದ್ವಿತೀಯ ಬಿ.ಕಾಂ ಎ ವಿಭಾಗದ ಕಾರ್ತಿಕ್ ಹಾಗೂ ದ್ವಿತೀಯ ಬಿ.ಕಾಂ ಡಿ ವಿಭಾಗದ ಸನಿತ್ ಗೌಡ ತೇರ್ಗಡೆಯಾದ ವಿದ್ಯಾರ್ಥಿಗಳು. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್‍ಡ್ ಅಕೌಂಟ್ಸ್ ಆಫ್ ಇಂಡಿಯಾ ಕಳೆದ ಡಿಸೆಂಬರ್‌ನಲ್ಲಿ ಸಿ.ಪಿ.ಟಿ ಪರೀಕ್ಷೆಯನ್ನು ಆಯೋಜಿಸಿತ್ತು. ಈ ಇಬ್ಬರೂ ವಿದ್ಯಾರ್ಥಿಗಳು ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ಮತ್ತು ವ್ಯವಃಆರ ನಿರ್ವಹಣಾ ವಿಭಾಗದ ಆಶ್ರಯದಲ್ಲಿ ಮಂಗಳೂರಿನ ಕಿರಣ್ ವಸಂತ್ […]

Read More

ಜ್ಞಾನವನ್ನು ವಿಜ್ಞಾನದ ಸಾಗರಕ್ಕೆ ಸೇರಿಸಿಕೊಳ್ಳಬೇಕು : ಶ್ರೀನಿವಾಸ ಪೈ

Published Date : Tuesday, 23-01-2018

ಜ್ಞಾನವನ್ನು ವಿಜ್ಞಾನದ ಸಾಗರಕ್ಕೆ ಸೇರಿಸಿಕೊಳ್ಳಬೇಕು : ಶ್ರೀನಿವಾಸ ಪೈ

ಪುತ್ತೂರು: ಪ್ರಾಥಮಿಕವಾಗಿರುವ ನಮ್ಮ ಜ್ಞಾನವನ್ನು ವಿಜ್ಞಾನವೆಂಬ ಮಹಾ ಸಾಗರಕ್ಕೆ ವಿಸ್ತರಿಸಬೇಕು. ಇದಕ್ಕೆ ಆಸಕ್ತಿ ಹಾಗೂ ಸತತ ಪರಿಶ್ರಮದ ಅಗತ್ಯವಿದೆ, ದೇಶದ ಅಭಿವೃದ್ಧಿಗೆ ವಿಜ್ಞಾನದ ಬೆಳವಣಿಗೆ ಅತೀ ಅವಶ್ಯಕ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೈ ಹೇಳಿದರು. ಕಾಲೇಜಿನ ವತಿಯಿಂದ ಪುತ್ತೂರು ಹಾಗೂ ನೆರೆಯ ತಾಲೂಕುಗಳನ್ನು ಕೇಂದ್ರವಾಗಿಸಿಕೊಂಡು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಇನ್ ಡೆಪ್ತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು. ಸರ್ಕಾರದಿಂದ ಸಾಕಷ್ಟು ಅನುದಾನವಿದ್ದರೂ ಮೂಲ ವಿಜ್ಞಾನಕ್ಕೆ ವಿದ್ಯಾರ್ಥಿಗಳ ಕೊರತೆಯಿದೆ ಎಂಬುವುದು […]

Read More

ವಿವೇಕಾನಂದ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಸಮಿತಿ ನ್ಯಾಕ್ ನಿಂದ ಎ ಶ್ರೇಣಿ

Published Date : Tuesday, 31-10-2017

ವಿವೇಕಾನಂದ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಸಮಿತಿ ನ್ಯಾಕ್ ನಿಂದ ಎ ಶ್ರೇಣಿ

ಪುತ್ತೂರು : ಇಲ್ಲಿನ ವಿವೇಕಾನಂದ ಪದವಿ ಕಾಲೇಜಿಗೆ ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡಿದ್ದ ರಾಷ್ಟ್ರೀಯ ಮೌಲ್ಯಾಂಕನ ಸಮಿತಿ(ನ್ಯಾಕ್)ಯು, ಕಾಲೇಜಿನ ಬಗೆಗಿನ ತನ್ನ ಸಮಗ್ರ ಅಧ್ಯಯನದ ಆಧಾರದ ಮೇಲೆ ಎ ಶ್ರೇಣಿಯನ್ನು ನೀಡಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಭೇಟಿ ನೀಡುವ ಈ ಪರಿಶೀಲನಾ ಸಮಿತಿ, 2010-11 ರಲ್ಲಿ ನಡೆದ ನ್ಯಾಕ್ ತಂಡದ ಭೇಟಿಯ ತರುವಾಯ ಕಾಲೇಜಿನಲ್ಲಾದ ಬದಲಾವಣೆ, ಬೆಳವಣಿಗೆ, ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳ ಗುಣಮಟ್ಟವನ್ನು ಕೂಲಂಕುಷವಾಗಿ ಪರಾಮರ್ಶೆ ನಡೆಸಿತ್ತು. ಈ ಹಿಂದೆಯೂ ವಿವೇಕಾನಂದ ಕಾಲೇಜಿಗೆ ಎ ಶ್ರೇಣಿ ಪ್ರಾಪ್ತವಾಗಿತ್ತು. […]

Read More

ವಿವೇಕಾನಂದದಲ್ಲಿ ವಿಶ್ವವಿದ್ಯಾನಿಲಯದಿಂದ ಉಪನ್ಯಾಸ ಮಾಲಿಕೆ : ಕಾಯಕಲ್ಪದ ಕವಿ ಅಮೃತ ಸೋಮೇಶ್ವರ : ಡಾ. ಸಂಪೂರ್ಣಾನಂದ ಬಳ್ಕೂರ್

Published Date : Monday, 25-09-2017

ವಿವೇಕಾನಂದದಲ್ಲಿ ವಿಶ್ವವಿದ್ಯಾನಿಲಯದಿಂದ ಉಪನ್ಯಾಸ ಮಾಲಿಕೆ : ಕಾಯಕಲ್ಪದ ಕವಿ ಅಮೃತ ಸೋಮೇಶ್ವರ : ಡಾ. ಸಂಪೂರ್ಣಾನಂದ ಬಳ್ಕೂರ್

ಪುತ್ತೂರು: ಯಕ್ಷಗಾನಕ್ಕೆ ಒಂದು ಕಾಯಕಲ್ಪವನ್ನು ನೀಡಿದವರು ಡಾ. ಅಮೃತ ಸೋಮೇಶ್ವರರು. ಅನೇಕ ಯಕ್ಷಗಾನ ಪ್ರಸಂಗಗಳನ್ನು ರಚಿಸುವ ಮೂಲಕ ಯಕ್ಷಗಾನ ಕವಿಯಾಗಿ ತಮ್ಮನ್ನು ಗುರುತಿಸಿಕೊಂಡವರು. ಅವರು ತಮ್ಮ ಸಾಮಾಜಿಕ ಸಂದೇಶವನ್ನು ತಮ್ಮ ರಚನೆಯ ಮೂಲಕ ನೀಡುತ್ತಾರೆ ಎಂಬುವುದು ವಿಶೇಷ ಎಂದು ಮಂಗಳೂರಿನ ಸಂತ ಆಗ್ನೆಸ್ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂಪೂರ್ಣಾನಂದ ಬಳ್ಕೂರ್ ಹೇಳಿದರು. ಅವರು ಇಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ […]

Read More