ಪ್ರಾಕೃತಿಕ ಪರಂಪರೆಯ ರಕ್ಷಣೆ ಅಗತ್ಯ: ಡಾ.ಶ್ರೀಶ ಕುಮಾರ್ ಎಂ.ಕೆ

Published Date : Wednesday, 05-02-2014

ಪ್ರಾಕೃತಿಕ ಪರಂಪರೆಯ ರಕ್ಷಣೆ ಅಗತ್ಯ: ಡಾ.ಶ್ರೀಶ ಕುಮಾರ್ ಎಂ.ಕೆ

ಪುತ್ತೂರು: ಪ್ರಾಕೃತಿಕ ಪರಂಪರೆ ನಮ್ಮ ದೇಶದ ಸಂಪತ್ತು. ಭಾರತೀಯರು ಮೂಲತಃ ಪ್ರಕೃತಿ ಆರಾಧಕರು. ಪ್ರಕೃತಿಯನ್ನು ರಕ್ಷಿಸಲು ನಮ್ಮ ಹಿರಿಯರು ಅದಕ್ಕೆ ದೈವೀಕ ಶಕ್ತಿಯನ್ನು ಕೊಟ್ಟಿದ್ದಾರೆ. ನಮ್ಮ ಜಗತ್ತು ಸೃಷ್ಟಿಯಾದ ದಿನದಿಂದ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳನ್ನು ದೈವ ಸೃಷ್ಠಿಯೆಂದು ಕರೆಯುತ್ತೇವೆ ಎಂದು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಎಂ.ಕೆ ಹೇಳಿದರು.        ಅವರು ಇತ್ತೀಚೆಗೆ ವಿವೇಕಾನಂದ ಕಾಲೇಜಿನಲ್ಲಿ ಹೆರಿಟೇಜ್ ಕ್ಲಬ್‌ನ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಹೆರಿಟೇಜ್ ಮಾದರಿ ತಯಾರಿ ಸ್ಪರ್ಧೆಯ ಬಹುಮಾನ […]

Read More

ವಿವೇಕಾನಂದದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ

Published Date : Wednesday, 05-02-2014

ವಿವೇಕಾನಂದದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ

ಪುತ್ತೂರು: ಪ್ರಪಂಚದಲ್ಲೇ ಅತಿ ದೊಡ್ಡದಾದ ಪ್ರಜಾಪ್ರಭುತ್ವವನ್ನು ಹೊಂದಿದ ಭಾರತದ ಹಿರಿಮೆ ಗರಿಮೆಯನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ಯುವ ಜನಾಂಗದ ಮೇಲಿದೆ. ದೇಶದ ಅಭಿವೃದ್ಧಿಯ ಪಣ ತೊಟ್ಟು ನಾವೆಲ್ಲರೂ ಮುನ್ನಡೆದಾಗ ದೇಶ ಸದೃಢಗೊಳ್ಳುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ ಹೇಳಿದರು.        ಅವರು ಭಾನುವಾರ ಇಲ್ಲಿನ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣಗೈದು ಮಾತನಾಡಿದರು.        ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ […]

Read More

ವಿವೇಕಾನಂದದಲ್ಲಿ ವಿವಿ ಮಟ್ಟದ ಪ್ರಬಂಧ ಮಂಡನಾ ಸ್ಪರ್ಧೆ

Published Date : Wednesday, 05-02-2014

ವಿವೇಕಾನಂದದಲ್ಲಿ ವಿವಿ ಮಟ್ಟದ ಪ್ರಬಂಧ ಮಂಡನಾ ಸ್ಪರ್ಧೆ

ಪುತ್ತೂರು: ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನ ಮತ್ತು ಓದುವ ಹವ್ಯಾಸವನ್ನು ವಿಚಾರ ಸಂಕಿರಣಗಳು ಹೆಚ್ಚಿಸುತ್ತವೆ. ಇದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನೂ ಬೆಳೆಸುತ್ತದೆ. ಜೀವನದಲ್ಲಿ ಅಭಿವೃದ್ಧಿ ಹೊಂದಲು ಕೇವಲ ವಿದ್ಯಾಭ್ಯಾಸವಿದ್ದರೆ ಸಾಲದು. ಅದರ ಜೊತೆಗೆ ಕೆಲವು ಕೌಶಲ್ಯವನ್ನೂ ರೂಢಿಸಿಕೊಳ್ಳಬೇಕು ಎಂದು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಎ.ಸಿ.ಟಿಯ ಮಾಜಿ ಅಧ್ಯಕ್ಷ ಡಾ. ಜಯಂತ್.ಎಚ್ ಹೇಳಿದರು.        ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗ ಮತ್ತು ಮಂಗಳೂರು […]

Read More

ಕೋಪ ಸಂಬಂಧವನ್ನು ಬೆಸೆಯುವ ಸಾಧನವೂ ಆಗಿದೆ: ಅತುಲ್ ಶೆಣೈ

Published Date : Saturday, 25-01-2014

  ಕೋಪ ಸಂಬಂಧವನ್ನು ಬೆಸೆಯುವ ಸಾಧನವೂ ಆಗಿದೆ: ಅತುಲ್ ಶೆಣೈ

ಪುತ್ತೂರು: ಕೋಪ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವ ಭಾವನೆ. ಆದರೆ ಅದನ್ನು ವ್ಯಕ್ತಪಡಿಸುವ ವಿಧಾನ ಮಾತ್ರ ಬೇರೆ ಬೇರೆಯಾಗಿರುತ್ತದೆ. ನಾವು ಯಾರ ಮೇಲೆ ಕೋಪವನ್ನು ಅತಿಯಾಗಿ ತೋರಿಸುತ್ತೇಯೋ ಅವರ ಮೇಲೆ ನಮಗೆ ಅತೀವ ಪ್ರೀತಿ ಇರುತ್ತದೆ ಎಂದು ವಿವೇಕಾನಂದ ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕ ಅತುಲ್ ಶೆಣೈ ಮಾತನಾಡಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿಗಳು ಇತ್ತೀಚೆಗೆ ಆಯೋಜಿಸಿದ್ದ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯಕ್ರಮದಲ್ಲಿ ಕೋಪ ಬಂದ್ರೆ ನೀವೇನು ಮಾಡುತ್ತೀರಾ? ಎಂಬ […]

Read More

ಸಹ್ಯ ಸಮಾಜದ ನಿರ್ಮಾಣಕ್ಕೆ ಒಳ್ಳೆಯ ಸಾಹಿತ್ಯ ಅಗತ್ಯ: ವಿಠಲ ನಾಯಕ

Published Date : Saturday, 25-01-2014

ಸಹ್ಯ ಸಮಾಜದ ನಿರ್ಮಾಣಕ್ಕೆ ಒಳ್ಳೆಯ ಸಾಹಿತ್ಯ ಅಗತ್ಯ: ವಿಠಲ ನಾಯಕ

ಪುತ್ತೂರು: ಯುವಕರು ಹಾದಿ ತಪ್ಪಲು ಒಳ್ಳೆಯ ಸಾಹಿತ್ಯದ ಕೊರತೆಯೂ ಕೂಡ ಒಂದು ಕಾರಣ. ಜೀವನ ಶೈಲಿ ಬದಲಾದಂತೆ ನಮ್ಮ ಸಾಹಿತ್ಯದಲ್ಲೂ ಅಪಾಯಕಾರಿಯೆನಿಸುವಷ್ಟು ಬದಲಾವಣೆಯಾಗುತ್ತಿದೆ ಆಧುನಿಕ ತಂತ್ರಜ್ಞಾನಗಳು ನಮ್ಮ ಜೀವನಕ್ಕೆ ಹಾನಿಯನ್ನುಂಟು ಮಾಡುತ್ತಿವೆ ಎಂದು ಬೊಳಂತಿಮೊಗರು ಶಾಲೆಯ ವಿಠಲ ನಾಯಕ ಎಂದು ಹೇಳಿದರು.         ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಸಂಘ, ಸಂಸ್ಕೃತ ಸಂಘ ಹಾಗೂ ಹಿಂದಿ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಗೀತ ವೈವಿಧ್ಯ ಅನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.         ಇಂದು ಸಮಾಜದಲ್ಲಿ ಮಾನವೀಯ […]

Read More

ಸುಬ್ರಹ್ಮಣ್ಯ ಈಶ್ವರ ಭಟ್‌ಗೆ ಡಾಕ್ಟರೇಟ್

Published Date : Friday, 17-01-2014

ಸುಬ್ರಹ್ಮಣ್ಯ ಈಶ್ವರ ಭಟ್‌ಗೆ ಡಾಕ್ಟರೇಟ್

ಪುತ್ತೂರು:ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ಉಪನ್ಯಾಸಕ ಸುಬ್ರಹ್ಮಣ್ಯ ಈಶ್ವರ ಭಟ್‌ರವರಿಗೆ ಸುರತ್ಕಲ್‌ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಇವರು ಎನ್‌ಐಟಿಕೆ ಯ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದರ್ಶಕ್ ಆರ್. ತ್ರಿವೇದಿ ಅವರ ಮಾರ್ಗದರ್ಶನದಲ್ಲಿ ಡೆವಲಪ್‌ಮೆಂಟ್ ಆಫ್ ಸಿಂಥೆಟಿಕ್ ರೂಟ್ಸ್ ಫಾರ್ ಕಾರ್ಬನ್- ಕಾರ್ಬನ್ ಅಂಡ್ ಕಾರ್ಬನ್ ಹೆಟಿರೋ ಆಟಮ್ ಬಾಂಡ್ ಫಾರ್ಮೇಶನ್ ಅಂಡರ್ ಸೋಲ್ವೆಂಟ್ – ಅಂಡ್ ಕೆಟಲಿಸ್ಟ್ – ಫ್ರೀ ಕಂಡಿಷನ್ಸ್ ಎಂಬ ವಿಷಯದ […]

Read More

ವಿವೇಕಾನಂದ ಆವರಣದಲ್ಲಿ ಗೋ ಕಥಾ ಕಿರಣ

Published Date : Saturday, 11-01-2014

ವಿವೇಕಾನಂದ ಆವರಣದಲ್ಲಿ ಗೋ ಕಥಾ ಕಿರಣ

ಪುತ್ತೂರು: ಹೆತ್ತ ಮಾತೆ, ಹೊತ್ತ ಮಾತೆ ಹಾಗೂ ಗೋಮಾತೆಯ ನಡುವೆ ಅವಿಚ್ಛಿನ್ನತೆ ಇದ್ದಾಗ ಮಾತ್ರ ದೇಶ ಸುಭಿಕ್ಷವಾಗಿರಲು ಸಾಧ್ಯ. ಗೋ ಮಾತೆ ಹೆತ್ತವಳಿಗೂ ಉಣಿಸಿದವಳು. ಹೊತ್ತವಳಿಗೂ ಬಡಿಸಿದವಳು. ಅಂತಹ ಶ್ರೇಷ್ಟ ತಾಯಿ ಗೋವು. ಆದ್ದರಿಂದಲೇ ಗೋವು ಸರ್ವಶ್ರೇಷ್ಟವೆನಿಸಿಕೊಂಡಿರುವುದು ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಅವರು ಶನಿವಾರ ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ ೧೫೦ನೇ ವರ್ಷಾಚರಣೆಯ ಸಮಾರೋಪ ಸಮಾರಂಭ ಹಾಗೂ […]

Read More

ಭಾರತದ ಸವಾಲುಗಳಿಗೆ ವಿವೇಕಾನಂದರ ಚಿಂತನೆಗಳು ಉತ್ತರ: ಸದಾನಂದ ಗೌಡ

Published Date : Saturday, 11-01-2014

ಭಾರತದ ಸವಾಲುಗಳಿಗೆ ವಿವೇಕಾನಂದರ ಚಿಂತನೆಗಳು ಉತ್ತರ: ಸದಾನಂದ ಗೌಡ

ಪುತ್ತೂರು: ಪಾಶ್ಚಿಮಾತ್ಯ ರಾಷ್ಟ್ರಗಳು ಆದರ್ಶವಾಗುತ್ತಿರುವ ಹೊತ್ತಿನಲ್ಲಿ, ಪರಕೀಯ ಸಂಸ್ಕಾರಗಳು ಮಾದರಿಯಾಗುತ್ತಿರುವ ಈ ಸಂದರ್ಭದಲ್ಲಿ ಜನರ ಅಂತಃಕರಣವನ್ನು ತಲುಪಿ ದೇಸೀಯ ಚಿಂತನೆಯೆಡೆಗೆ ಸೆಳೆದೊಯ್ಯಬಲ್ಲ, ನಮ್ಮ ಪರಂಪರೆಯ ಶ್ರೇಷ್ಟತೆಯನ್ನು ಸಾರಿ ಹೇಳಬಲ್ಲ ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿನ ಸಮಾಜದ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.        ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಮಹೋತ್ಸವ ಸಮಿತಿ ಆಶ್ರಯದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದ ಶ್ರೀ ರಾಮಕೃಷ್ಣ ಪರಮಹಂಸ ಬಯಲು ರಂಗಮಂದಿರದಲ್ಲಿ ನಡೆದ ಸ್ವಾಮಿ ವಿವೇಕಾನಂದರ […]

Read More

ಸಂಶೋಧನಾ ನಿರತ ಅಧ್ಯಾಪಕರೊಂದಿಗೆ ಸಂವಾದ

Published Date : Thursday, 09-01-2014

ಸಂಶೋಧನಾ ನಿರತ ಅಧ್ಯಾಪಕರೊಂದಿಗೆ ಸಂವಾದ

ಪುತ್ತೂರು: ಸಂಶೋಧನೆಗೆ ಹೊರಡುವ ಪ್ರತಿಯೊಬ್ಬನಲ್ಲೂ ಆರ್ಥಿಕ ದೃಢತೆಗಿಂತಲೂ ಅನುಭವ ಮುಖ್ಯ. ಸಂಶೋಧನಾ ವಿಷಯ ಯಾವುದೇ ಆಗಿದ್ದರೂ, ಸಾಮಾಜಿಕ ಪ್ರಯೋಜನಕ್ಕಿರಬೇಕು. ಸಂಶೋಧನೆಯಲ್ಲಿ ನಿರತರಾಗುವವರು ಕಾಲ ಕಾಲಕ್ಕೆ ತಮ್ಮ ಜ್ಞಾನದ ಹರವನ್ನು ವಿಸ್ತರಿಸಿಕೊಳ್ಳುತ್ತಿರಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ, ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ವಿ.ವಿ.ಭಟ್ ಹೇಳಿದರು. ಅವರು ಮಂಗಳವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನೆಯಲ್ಲಿ ನಿರತರಾದ ಅಧ್ಯಾಪಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ತಾವು ಕೊಡಚಾದ್ರಿಯ ಜೈವಿಕ ವ್ಯಾಸಂಗ ಮತ್ತು ಕಬ್ಬಿಣದ ಕಂಬದ ಬಗೆಗೆ ನಡೆಸಿದ ಸಂಶೋಧನೆಯ ಬಗ್ಗೆ […]

Read More

ವಿವೇಕಾನಂದದಲ್ಲಿ ಅನ್ವೇಷಣಾ-2013 ಉದ್ಘಾಟನೆ

Published Date : Wednesday, 08-01-2014

ವಿವೇಕಾನಂದದಲ್ಲಿ ಅನ್ವೇಷಣಾ-2013 ಉದ್ಘಾಟನೆ

ಪುತ್ತೂರು: ಪಾರಂಪರಿಕ ನಂಬಿಕೆಯನ್ನು ಮೂಢನಂಬಿಕೆಯೆಂದು ತಿರಸ್ಕರಿಸಬಾರದು. ಪ್ರಾಚೀನ ಜ್ಞಾನವನ್ನು ವಿಜ್ಞಾನದೊಂದಿಗೆ ಬೆರೆಸಿಕೊಂಡಾಗ ಅದ್ಭುತ ಸಾಧನೆ ಸಾಧ್ಯ. ವಿಜ್ಞಾನ ಮತ್ತು ಮೂಢನಂಬಿಕೆಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪರಂಪರಾನುಗತ ಜ್ಞಾನವನ್ನು ಅರಿಯಬೇಕಿದೆ ಎಂದು ಕೃಷಿ ಸಂಶೋಧಕ ಬದನಾಜೆ ಶಂಕರ ಭಟ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮಂಗಳವಾರ ವಿಜ್ಞಾನ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಅನ್ವೇಷಣಾ ಅನ್ನುವ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.        ಪ್ರಾಚೀನ ಗ್ರಂಥಗಳಿಗೆ ಧಾರ್ಮಿಕ ವ್ಯಾಖ್ಯಾನವನ್ನು ಹೊರತುಪಡಿಸಿದ ಅರ್ಥಗಳೂ ಇವೆ. ಆ ಗ್ರಂಥಗಳಲ್ಲಿನ […]

Read More