ವಿವೇಕಾನಂದದಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ

Published Date : Monday, 07-04-2014

ವಿವೇಕಾನಂದದಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ

ಪುತ್ತೂರು: ಒಂದು ಪ್ರದೇಶದ ಕಾನೂನನ್ನು ಮಾಡುವ ಸರ್ಕಾರವನ್ನು ರೂಪಿಸುವ ಅವಕಾಶ ಪ್ರಜಾಪ್ರಭುತ್ವ ದೇಶದಲ್ಲಿದೆ. ಅರಾಜಕತೆಯಿರುವ ದೇಶದಲ್ಲಿದ್ದಾಗ ಮಾತ್ರ ನಮಗೆ ಪ್ರಜಾಪ್ರಭುತ್ವದ ಮಹತ್ವ ತಿಳಿಯುತ್ತದೆ. ಸಹನೀಯವಾದ ವಾತಾವರಣ ಪ್ರಜಾಪ್ರಭುತ್ವದಲ್ಲಿದೆ. ಆದ್ದರಿಂದ ಇಡೀ ಪ್ರಪಂಚದಲ್ಲಿಯೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ಪ್ರಸಿದ್ಧವಾಗಿದೆ ಎಂದು ಸೈಂಟ್ ಫಿಲೋಮಿನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಧಾಕೃಷ್ಣ ಹೇಳಿದರು. ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪೊಲಿಟಿಕಲ್ ಫೋರಂ, ಮಾನವಿಕ ಸಂಘ ಮತ್ತು ಎನ್‌ಎಸ್‌ಎಸ್‌ಗಳ ಸಹಯೋಗದಲ್ಲಿ ನಡೆದ ಯುವ ಮತದಾರ ಜಾಗೃತಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ […]

Read More

ಜವಾಬ್ಧಾರಿಯನ್ನರಿತು ರಾಜಕೀಯಕ್ಕೆ ಪ್ರವೇಶಿಸಬೇಕು: ಹರಿಣಿ

Published Date : Monday, 07-04-2014

ಜವಾಬ್ಧಾರಿಯನ್ನರಿತು ರಾಜಕೀಯಕ್ಕೆ ಪ್ರವೇಶಿಸಬೇಕು: ಹರಿಣಿ

ಪುತ್ತೂರು: ದೇಶದ ಸಮಸ್ಯೆಗಳಿಗೆ ಶಿಕ್ಷಣದ ಕೊರತೆಯೇ ಕಾರಣ. ವಿದ್ಯೆ ಮತ್ತು ಯುವಜನತೆ ಒಟ್ಟು ಸೇರಿದಾಗ ದೇಶವನ್ನೇ ಬದಲಾಯಿಸಬಹುದು. ಸ್ವಾತಂತ್ರ್ಯ ಪೂರ್ವದಲ್ಲೇ ವಿದ್ಯಾರ್ಥಿಗಳ ಚಳುವಳಿಗೆ ಬೆಂಬಲ ಸಿಕ್ಕಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಕಾಲೇಜು ವಿದ್ಯಾರ್ಥಿ ಸಂಘಗಳನ್ನು ಸಹಕಾರಿಯಾಗಿವೆ ಎಂದು ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಹರಿಣಿ ಹೇಳಿದರು.         ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಚರ್ಚಾ ಕಾರ್ಯಕ್ರಮ ’ಮಾತು ಮಥನ’ದಲ್ಲಿ ಭಾಗವಹಿಸಿ ’ವಿದ್ಯಾರ್ಥಿಗಳ ರಾಜಕೀಯ ಪ್ರವೇಶ’ ವಿಚಾರದ […]

Read More

ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಿರುಚಿತ್ರ ಸಿಗ್ ಬಿಡುಗಡೆ

Published Date : Wednesday, 26-03-2014

ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಿರುಚಿತ್ರ ಸಿಗ್ ಬಿಡುಗಡೆ

ಪುತ್ತೂರು: ವಿಷಯವೊಂದನ್ನು ಪರಿಣಾಮಕಾರಿಯಾಗಿ ಹೇಳುವ ಮಾಧ್ಯಮವಾಗಿ ಸಿನೆಮಾ ಬೆಳೆದಿದೆ. ನಿಗದಿತ ಸಮಯ, ಚೌಕಟ್ಟಿನೊಳಗೆ ಜನರ ಅಂತರಾಳವನ್ನು ಮುಟ್ಟುವಂತೆ ಸಿನೆಮಾವೊಂದು ರೂಪುಗೊಂಡಾಗ ಅದು ಜನಮನದಲ್ಲಿ ಸ್ಥಾಯಿಯಾಗಿ ಉಳಿಯುತ್ತದೆ. ಸಿನೆಮಾದ ಬಗೆಗೆ ವಿದ್ಯಾರ್ಥಿಗಳು ಆಸಕ್ತಿ ಹೊಂದಿ ಕಿರುಚಿತ್ರಗಳನ್ನು ಹೊರತರುವುದು ಸ್ವಾಗತಾರ್ಹ ಸಂಗತಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಸುನಿಲ್ ಹೆಗ್ಡೆ ಹೇಳಿದರು.        ಅವರು ಸೋಮವಾರ ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಸಿಗ್ ಅನ್ನುವ ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. […]

Read More

ಜೋತಿಷ್ಯಶಾಸ್ತ್ರದ ಬಗ್ಗೆ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಿದೆ: ಸುಹಾಸ್ ಕೃಷ್ಣ

Published Date : Wednesday, 26-03-2014

ಜೋತಿಷ್ಯಶಾಸ್ತ್ರದ ಬಗ್ಗೆ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಿದೆ: ಸುಹಾಸ್ ಕೃಷ್ಣ

ಪುತ್ತೂರು: ಭವಿಷ್ಯ ಎಂದರೆ ಮುಂದೆ ಸಂಭವಿಸುವ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದು. ಜೋತಿಷ್ಯಶಾಸ್ತ್ರ ಎಂಬುವುದು ಬಹಳ ಹಳೆಯ ಶಾಸ್ತ್ರವಾಗಿದೆ. ಅನೇಕ ಪ್ರಾಚೀನ ಗ್ರಂಥಗಳು ಇದರ ಬಗ್ಗೆ ಮಾಹಿತಿ ನೀಡುತ್ತವೆ. ಮಹಾನ್ ಋಷಿಗಳು ತಮ್ಮ ಗ್ರಂಥಗಳಲ್ಲಿ ಜೋತಿಷ್ಯಶಾಸ್ತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂದು ವಿವೇಕಾನಂದ ಕಾಲೇಜಿನ ಪ್ರಾಣಿಶಾಸ್ತ್ರ ಉಪನ್ಯಾಸಕ ಸುಹಾಸ್ ಕೃಷ್ಣ ತಿಳಿಸಿದರು.      ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾದ ವತಿಯಿಂದ ನಡೆದ ಮಣಿಕರ್ಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ’ದಿನ ಭವಿಷ್ಯ’ ಎಂಬ ವಿಷಯದ ಕುರಿತು ಮಾತನಾಡಿದರು. […]

Read More

ನಮ್ಮಲ್ಲಿನ ಸಂಕುಚಿತ ಭಾವನೆಯನ್ನು ಬಿಡಬೇಕು: ಯೋಗೀಂದ್ರ

Published Date : Thursday, 20-03-2014

ನಮ್ಮಲ್ಲಿನ ಸಂಕುಚಿತ ಭಾವನೆಯನ್ನು ಬಿಡಬೇಕು: ಯೋಗೀಂದ್ರ

ಪುತ್ತೂರು: ಸಾಂಪ್ರದಾಯಿಕ ಸಮಾಜದ ಮೇಲೆ ಆಧುನಿಕ ಸಮಾಜವು ನಿಂತಿದೆ. ಆಧುನಿಕ ಸಮಾಜದ ಮುಖ್ಯ ಲಕ್ಷಣವೆಂದರೆ ಅದರ ಮೇಲೆ ಸರ್ಕಾರದ, ಧರ್ಮದ ಪ್ರಭಾವವಿರಬಾರದು. ಯಾವುದೇ ಒಂದು ಸಮಾಜವು ಸಂಪೂರ್ಣವಾಗಿ ಆಧುನಿಕ ಸಮಾಜವಾಗಿ ಬದಲಾಗಲು ಸಾಧ್ಯವಿಲ್ಲ. ಇಂದಿನ ನಮ್ಮ ಸಮಾಜ ಆಧುನಿಕತೆ ಮತ್ತು ಸಾಂಪ್ರದಾಯಿಕತೆಗಳ ಸಮನ್ವಯದಿಂದಾಗಿದೆ ಎಂದು ಐಕಳದ ಪಾಂಪೈನ ಸಮಾಜಶಾಸ್ತ್ರ ಪ್ರಾಧ್ಯಾಪಕ ಯೋಗೀಂದ್ರ ಹೇಳಿದರು. ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ ಮತ್ತು ಮಂಗಳೂರಿನ ಸಮಾಜಶಾಸ್ತ್ರ ಸಂಘದ ಸಹಯೋಗದಲ್ಲಿ ಟಿ.ಕೆ.ವಿ ಭಟ್‌ರ ಸ್ಮರಣಾರ್ಥ ಉಪನ್ಯಾಸ ಹಾಗೂ […]

Read More

ವಿವೇಕಾನಂದದಲ್ಲಿ ಎರಡು ದಿನಗಳ ಸಮಾಜಶಾಸ್ತ್ರ ವಿಚಾರ ಸಂಕಿರಣ ಉದ್ಘಾಟನೆ

Published Date : Monday, 17-03-2014

ವಿವೇಕಾನಂದದಲ್ಲಿ ಎರಡು ದಿನಗಳ ಸಮಾಜಶಾಸ್ತ್ರ ವಿಚಾರ ಸಂಕಿರಣ ಉದ್ಘಾಟನೆ

ಪುತ್ತೂರು: ನಮ್ಮ ಸಮಾಜದಲ್ಲಿ ನಾನಾ ರೀತಿಯ ಸಮಸ್ಯೆಗಳಿವೆ. ಜಾತಿ, ಲಿಂಗ, ಸ್ಥಾನಮಾನ ಹೀಗೆ ನಾನಾ ಸ್ಥರದಲ್ಲಿ ಅಸಮಾನತೆಗಳಿವೆ ಇವುಗಳನ್ನು ಹೋಗಲಾಡಿಸಿದಾಗಲಷ್ಟೇ ಸಮಾಜ ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯ. ಶಿಕ್ಷಿತ ಯುವ ಸಮಾಜ ನಗರದ ಆಕರ್ಷಣೆಯಿಂದ ಹೊರಬಂದು ಹಳ್ಳಿಗಳೆಡೆಗೆ ಗಮನ ಹರಿಸಿದಾಗ ದೇಶ ಬೆಳವಣಿಗೆ ಕಾಣಲು ಸಾಧ್ಯ ಎಂದು ಶಿಕ್ಷಣ ತಜ್ಞ, ಚಿಂತಕ ಪ್ರೊ.ಚಂದ್ರಶೇಖರ ದಾಮ್ಲೆ ಹೇಳಿದರು.        ಅವರು ಶುಕ್ರವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿ.ವಿ ಸಮಾಜಶಾಸ್ತ್ರ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಪ್ರೊ.ಟಿ.ಕೆ.ವಿ […]

Read More

ವಿವೇಕಾನಂದದಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

Published Date : Monday, 17-03-2014

ವಿವೇಕಾನಂದದಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

ಪುತ್ತೂರು: ಒಬ್ಬ ಉತ್ತಮ ಅಧ್ಯಾಪಕನಿಗೆ ವಿದ್ಯಾರ್ಥಿಗಳು ನೀಡುವ ಪ್ರಮಾಣ ಪತ್ರವೇ ನಿಜವಾದ ಪ್ರಶಸ್ತಿ. ಇಂದು ವಿದ್ಯಾರ್ಥಿಗಳು ಮತ್ತು ಗುರುಗಳ ನಡುವಿನ ಅವಿನಾಭಾವ ಸಂಬಂಧಗಳು ಮರೆಯಾಗುತ್ತಿವೆ. ದೊರಕಿದ ಪ್ರಶಸ್ತಿ ಗುರುಪರಂಪರೆಗೆ ಸಲ್ಲಬೇಕಾದುದು ಎಂದು ಬೆಂಗಳೂರಿನ ಚನ್ನೇನಹಳ್ಳಿಯ ವೇದವಿಜ್ಞಾನ ಶೋಧ ಸಂಸ್ಥಾನದ ಸಂಶೋಧನಾ ಮಾರ್ಗದರ್ಶಕ ಮತ್ತು ಪ್ರಾಧ್ಯಾಪಕ ಡಾ.ಜಿ.ಎನ್ ಭಟ್ ಹೇಳಿದರು.        ಅವರು ಶುಕ್ರವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಸಂಘ ಮತ್ತು ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ ’ಶಿವರಾಮ ಕಾರಂತ ಉಪನ್ಯಾಸ’ ಮತ್ತು ಶಂಕರ […]

Read More

ಸ್ಪರ್ಧಾತ್ಮಕ ಪರೀಕ್ಷೆ ನಾಗರಿಕ ಸೇವೆಯ ಮೌಲ್ಯವನ್ನು ಹೆಚ್ಚಿಸುತ್ತದೆ:ರಾಮ್‌ಕುಮಾರ್

Published Date : Wednesday, 05-03-2014

ಸ್ಪರ್ಧಾತ್ಮಕ ಪರೀಕ್ಷೆ ನಾಗರಿಕ ಸೇವೆಯ ಮೌಲ್ಯವನ್ನು ಹೆಚ್ಚಿಸುತ್ತದೆ:ರಾಮ್‌ಕುಮಾರ್

ಪುತ್ತೂರು: ಭಾರತಕ್ಕೆ ನಾಗರಿಕ ಸೇವೆಯನ್ನು ಬ್ರಿಟೀಷ್ ಈಸ್ಟ್ ಇಂಡಿಯ ಕಂಪನಿಯು ಮೊದಲಿಗೆ ಪರಿಚಯಿಸಿತು. ಇದಕ್ಕೆ  ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಸೇರಬಹುದು. ಯಾರಲ್ಲಿ ಪ್ರತಿಭೆಯಿದೆಯೋ ಅಂತವರು ಈ ಪರೀಕ್ಷೆಯನ್ನು ಬರೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆ ನಾಗರಿಕ ಸೇವೆಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಆದಾಯ ತೆರಿಗೆಯ ಮುಖ್ಯ ಆಯುಕ್ತರಾಗಿ ನಿವೃತ್ತರಾದ ರಾಮ್‌ಕುಮಾರ್ ಹೇಳಿದರು.        ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ, ಉದ್ಯೋಗ ಮತ್ತು ತರಬೇತಿ ಘಟಕ ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ನಡೆದ […]

Read More

ಪ್ರಕೃತಿಯ ಸಮತೋಲನಕ್ಕೆ ಮನುಷ್ಯನಷ್ಟೇ ಪ್ರಾಣಿಗಳೂ ಮುಖ್ಯ: ಗೀತಾ

Published Date : Wednesday, 05-03-2014

ಪ್ರಕೃತಿಯ ಸಮತೋಲನಕ್ಕೆ ಮನುಷ್ಯನಷ್ಟೇ ಪ್ರಾಣಿಗಳೂ ಮುಖ್ಯ: ಗೀತಾ

ಪುತ್ತೂರು: ಪ್ರಾಕೃತಿಕ ಸಮತೋಲನಕ್ಕೆ ಮನುಷ್ಯ ಹೇಗೆ ಮುಖ್ಯವೋ, ಹಾಗೆಯೇ ಪ್ರಾಣಿಗಳೂ ಕೂಡ ಬಹಳ ಮುಖ್ಯ. ಪ್ರಾಣಿಗಳನ್ನು ರಕ್ಷಿಸುವ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಪ್ರಕೃತಿಯ ವೈಚಿತ್ರ್ಯವನ್ನು ಅರ್ಥಮಾಡಿಕೊಂಡಾಗ ಪ್ರಾಣಿಗಳಿಂದಾಗುವ ಪಜೀತಿಗಳಿಂದ ಮಾನವೀಯ ಸಂಬಂಧಗಳು ಹಾಳಾಗುವುದನ್ನು ತಪ್ಪಿಸಬಹುದು ಎಂದು ವಿವೇಕಾನಂದ ಕಾಲೇಜಿನ ಕನ್ನಡ ಉಪನ್ಯಾಸಕಿ ಗೀತಾ ಕುಮಾರಿ.ಟಿ ಹೇಳಿದರು. ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆದ ಮಣಿಕರ್ಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಪ್ರಾಣಿಗಳಿಂದ ಪಜೀತಿ’ಎಂಬ ವಿಷಯದ ಕುರಿತು ಮಾತನಾಡಿದರು. […]

Read More

ವಿವೇಕಾನಂದದಲ್ಲಿ ದತ್ತಿನಿಧಿ ಪ್ರದಾನ ಕಾರ್ಯಕ್ರಮ

Published Date : Wednesday, 05-03-2014

ವಿವೇಕಾನಂದದಲ್ಲಿ ದತ್ತಿನಿಧಿ ಪ್ರದಾನ ಕಾರ್ಯಕ್ರಮ

ಪುತ್ತೂರು: ಕಾಯಕವೇ ಕೈಲಾಸ. ಕೆಲಸವನ್ನು ಮಾಡುತ್ತಾ ನಮ್ಮ ಜೀವನವನ್ನು ಕಳೆಯಬೇಕು. ಕೆಲಸ ಮಾಡುವುದರಿಂದ  ಜೀವನ ಸುಗಮವಾಗಿರುತ್ತದೆ. ನಾವು ಕೆಲಸ ಮಾಡಿದಷ್ಟು ನಮ್ಮಲ್ಲಿ ಅನುಭವಗಳು ಹೆಚ್ಚುತ್ತವೆ. ನಿಸ್ವಾರ್ಥದಿಂದ ಮಾಡಿದ ಯಾವುದೇ ಕೆಲಸ ಬಹು ಬೇಗ ಫಲ ಕೊಡುತ್ತದೆ ಎಂದು ಹಿರಿಯ ಕೃಷಿಕ ಪಡಾರು ನಾರಾಯಣ ಭಟ್ ಹೇಳಿದರು.        ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ಶ್ರೀ ಉಮಾಮಹೇಶ್ವರ ದೇವರು ಪಡಾರು ದತ್ತಿನಿಧಿ, ದಿ.ಬಡೆಕ್ಕಿಲ ಸೀತಾರಾಮ ಭಟ್ ಲಕ್ಷ್ಮಿಅಮ್ಮ ಸ್ಮರಣಾರ್ಥ ದತ್ತಿನಿಧಿ ವಿದ್ಯಾರ್ಥಿ ವೇತನ ಹಾಗೂ ದಿ. […]

Read More