ವಿವೇಕಾನಂದಲ್ಲಿ ಉಪನ್ಯಾಸಕಿ ಸ್ವಾತಿಯವರಿಗೆ ಬೀಳ್ಕೊಡುಗೆ

Published Date : Saturday, 15-02-2014

ವಿವೇಕಾನಂದಲ್ಲಿ ಉಪನ್ಯಾಸಕಿ ಸ್ವಾತಿಯವರಿಗೆ ಬೀಳ್ಕೊಡುಗೆ

ಪುತ್ತೂರು: ಒಬ್ಬ ವ್ಯಕ್ತಿಗೆ ತನ್ನ ವಿದಾಯವನ್ನು ಸ್ವೀಕರಿಸುವುದು ಬಹಳ ಕಷ್ಟ. ತರಗತಿಯಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರಿಂದ ಎಷ್ಟು ಕಲಿಯುತಾರೆ ಅದೇ ರೀತಿ ಉಪನ್ಯಾಸಕರೂ ವಿದ್ಯಾರ್ಥಿಗಳಿಂದ ಹೊಸ ವಿಚಾರಗಳನ್ನು  ಕಲಿಯುತ್ತಾರೆ. ವಿದ್ಯಾರ್ಥಿಗಳ ಪ್ರತಿ ಯಶಸ್ಸಿನಲ್ಲಿ ತನ್ನ ಯಶಸ್ಸನ್ನು ಒಬ್ಬ ನಿಜವಾದ ಉಪನ್ಯಾಸಕ ಕಾಣುತ್ತಾನೆ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕಿಯಾಗಿದ್ದ ಸ್ವಾತಿ ಹೇಳಿದರು. ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜು ನೀಡುವ ಎಲ್ಲಾ ಅವಕಾಶಗಳನ್ನು ಉತ್ತಮ ರೀತಿಯಲ್ಲಿ […]

Read More

ಸಾಮಾನ್ಯ ಮಂದಿಗೂ ಸಾಧನೆ ಸಾಧ್ಯ: ಡಾ.ರವೀಂದ್ರನಾಥ ಶಾನುಭೋಗ್

Published Date : Saturday, 15-02-2014

ಸಾಮಾನ್ಯ ಮಂದಿಗೂ ಸಾಧನೆ ಸಾಧ್ಯ: ಡಾ.ರವೀಂದ್ರನಾಥ ಶಾನುಭೋಗ್

ಪುತ್ತೂರು: ಸಮಾಜ ಸೇವೆ ಮಾಡುವುದಕ್ಕೆ ಶಾಸಕ, ಸಂಸದನಾಗಬೇಕೆಂದೇನೂ ಇಲ್ಲ. ಸಾಮಾನ್ಯ ನಾಗರಿಕನೂ ಮಹತ್ತರವಾದದ್ದನ್ನು ಸಾಧಿಸಲು ಸಾಧ್ಯ. ಜನ ನಾಯಕರಲ್ಲಿರುವುದು ವಹಿಸಿ ಕೊಟ್ಟ ಅಧಿಕಾರ ಮಾತ್ರ. ಆದರೆ ಈ ದೇಶದ ನಾಗರಿಕರಲ್ಲಿ ಸಹಜವಾದ ಮತ್ತು ಶಾಶ್ವತವಾದ ಅಧಿಕಾರವಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ನಾಯಕರೆನಿಸಿಕೊಂಡವರಿಗಿಂತ ಮಿಗಿಲಾದ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು ಎಂದು ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭೋಗ್ ಹೇಳಿದರು.        ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ಉಡುಪಿಯ ಮಾನವ […]

Read More

ವಿವೇಕಾನಂದದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

Published Date : Saturday, 15-02-2014

ವಿವೇಕಾನಂದದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

ಪುತ್ತೂರು: ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿರುವವರು ಮಾನವರೇ. ಇದು ನಮ್ಮ ಮಾನಸಿಕ ಬೆಳವಣಿಗೆ ಇನ್ನೂ ಪಕ್ವಗೊಂಡಿಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದಲೇ ಮನುಕುಲದ ಇತಿಹಾಸ, ಹಾಗೂ ಮನೋದೈಹಿಕ ಬೆಳವಣಿಗೆಯ ಬಗೆಗೆ ವಿವರವಾಗಿ ಚರ್ಚೆ ನಡೆಯಬೇಕು. ಮನುಷ್ಯನು ಮನುಷ್ಯನಾಗಿ ಬದುಕುವ ವಿಚಾರವಾಗಿ ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕವಾಗಿ ಚಿಂತಿಸಬೇಕು ಎಂದು ಪುತ್ತೂರಿನ ಹೆಚ್ಚುವರಿ ನ್ಯಾಯಾಧೀಶ ಶರವಣನ್ ಎಸ್ ಹೇಳಿದರು.        ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿಯ  ಸಹಯೋಗದೊಂದಿಗೆ ಶುಕ್ರವಾರ […]

Read More

ತುಳುನಾಡು ಏಕೀಕರಣಕ್ಕೆ ಪ್ರತ್ಯೇಕ ರಾಜ್ಯದ ಅಗತ್ಯವಿದೆ :ಡಾ| ನಿರಂಜನ ರೈ

Published Date : Tuesday, 11-02-2014

ತುಳುನಾಡು ಏಕೀಕರಣಕ್ಕೆ ಪ್ರತ್ಯೇಕ ರಾಜ್ಯದ ಅಗತ್ಯವಿದೆ :ಡಾ| ನಿರಂಜನ ರೈ

ಪುತ್ತೂರು: ನಮಗೆ ಸ್ವಾತಂತ್ರ್ಯ ಸಿಕ್ಕಿ ಆರು ದಶಕಗಳೇ ಕಳೆದಿವೆ. ಈ ಆರು ದಶಕಗಳಿಂದ ತುಳುವರು ತುಳುನಾಡ ಪ್ರತ್ಯೇಕತೆಗೆ ಒತ್ತಾಯ ಮಾಡುತ್ತಲೇ ಇದ್ದಾರೆ. ಆದರೆ ಇಷ್ಟು ವರ್ಷಗಳಲ್ಲಿ ಅವರ ಈ ಬೇಡಿಕೆಯನ್ನು ಸರ್ಕಾರ ಪೂರೈಸಿಲ್ಲ. ಇದಕ್ಕೆ ಮುಖ್ಯ ಕಾರಣ ತುಳುನಾಡಲ್ಲೇ ತುಳುಭಾಷೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ಎಂದು ಖ್ಯಾತ ವೈದ್ಯ ಹಾಗೂ ನೇತ್ರಾವತಿ ನದಿ ತಿರುವು ಯೋಜನೆಯ ವಿರೋಧಿ ಸಮಿತಿಯ ಅಧ್ಯಕ್ಷ ಡಾ| ನಿರಂಜನ ರೈ ಹೇಳಿದರು.        ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ತುಳು ಸಂಘ […]

Read More

ವಿವೇಕಾನಂದದ 9 ಜನ ವಿದ್ಯಾರ್ಥಿಗಳು ವಿಪ್ರೋಕ್ಕೆ ಆಯ್ಕೆ

Published Date : Tuesday, 11-02-2014

ವಿವೇಕಾನಂದದ 9 ಜನ ವಿದ್ಯಾರ್ಥಿಗಳು ವಿಪ್ರೋಕ್ಕೆ ಆಯ್ಕೆ

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ೯ ಜನ ಬಿಎಸ್ಸಿ ವಿದ್ಯಾರ್ಥಿಗಳು ವಿಪ್ರೋ (ವೇಸ್ ಅಂಡ್ ವಿಸ್ತಾ) ಕಂಪೆನಿಯವರು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.  ಅಂತಿಮ ವರ್ಷದ ಬಿಎಸ್ಸಿ ಪದವಿಯ ಸ್ಮಿತಾ ವಾಗ್ಳೆ, ಕಾವ್ಯ ಎಂ.ಎಸ್, ಅಶ್ವಿನ್ ಎ.ಜೆ, ಸ್ಮಿತಾ ಕೆ, ಅನುಪಮಾ ಬಿ, ನೂರ್‍ಜಾನ್ ಬೇಗಂ, ಸನತ್, ಅಜಯ್ ಕೃಷ್ಣ ಮತ್ತು ನವ್ಯತಾ ಪಿ ಆಯ್ಕೆಯಾದ ವಿದ್ಯಾರ್ಥಿಗಳು.        ಕ್ಯಾಂಪಸ್ ಸಂದರ್ಶನಕ್ಕಾಗಿ ವಿವೇಕಾನಂದ ಖಾಲೇಜಿನಿಂದ ಮಾತ್ರವಲ್ಲದೆ ಫಿಲೋಮಿನ ಕಾಲೇಜು ಪುತ್ತೂರು, ಎನ್.ಎಂ.ಸಿ ಸುಳ್ಯ, ಮಂಗಳೂರಿನ ಭಾರತಿ ಕಾಲೇಜು, […]

Read More

ವಿವೇಕಾನಂದದಲ್ಲಿ ನಾಟಕ ಪಠ್ಯಗಳ ಕುರಿತು ವಿಚಾರ ಸಂಕಿರಣ

Published Date : Saturday, 08-02-2014

ವಿವೇಕಾನಂದದಲ್ಲಿ ನಾಟಕ ಪಠ್ಯಗಳ ಕುರಿತು ವಿಚಾರ ಸಂಕಿರಣ

ಪುತ್ತೂರು: ನಾಟಕವನ್ನು ಕೇವಲ ಓದುವುದು ಅಭಿನಯಿಸುವುದಷ್ಟೇ ಅಲ್ಲದೆ ಅರ್ಥೈಸಿಕೊಳ್ಳುವುದೂ ಅಗತ್ಯ. ಹಾಗೆ ನಾಟಕದ ಬಗೆಗೆ ತಿಳಿದುಕೊಳ್ಳುತ್ತಾ ಅಧ್ಯಯನದಲ್ಲಿ ತೊಡಗಿದರೆ ಅದು ಹೆಚ್ಚಿನ ಪರಿಣಾಮವನ್ನು ಕೊಡಬಲ್ಲದು. ನಾಟಕಕ್ಕೆ ಅತ್ಯಂತ ಹೆಚ್ಚಿನ ಸಂವಹನ ಶಕ್ತಿ ಇದೆ. ವಿದ್ಯಾರ್ಥಿಗಳು ಬರೀ ಅಂಕಗಳಿಗಾಗಿ ಮಾತ್ರ ನಾಟಕವನ್ನು ಓದದೇ, ಬದುಕನ್ನು ರೂಪಿಸುವುದಕ್ಕೆ ನಾಟಕವನ್ನು ಅಭ್ಯಾಸ ಮಾಡಬೇಕು ಎಂದು ಪುತ್ತೂರಿನ ರಂಗಕರ್ಮಿ ಐ.ಕೆ ಬೊಳುವಾರು ಹೇಳಿದರು.       ಅವರು ಶುಕ್ರವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ  ಮಂಗಳೂರು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ ವಿಕಾಸ […]

Read More

2022ರಲ್ಲಿ ಭಾರತ ಸೂಪರ್ ಪವರ್ : ಪ್ರೊ.ಸಂತೋಷ್ ರೆಬೆಲ್ಲೋ

Published Date : Wednesday, 05-02-2014

2022ರಲ್ಲಿ ಭಾರತ ಸೂಪರ್ ಪವರ್ : ಪ್ರೊ.ಸಂತೋಷ್ ರೆಬೆಲ್ಲೋ

ಪುತ್ತೂರು: ೨೦೨೨ರಲ್ಲಿ ಭಾರತದಲ್ಲಿನ ಜನರ ಸರಾಸರಿ ವರ್ಷ ೨೯ ಆಗಿರುತ್ತದೆ. ಅರ್ಥಾತ್ ಅದ್ಭುತ ಯುವ ಸಮಾಜವನ್ನು ನಾವು ಹೊಂದಲಿದ್ದೇವೆ. ಈ ಹಿನ್ನಲೆಯಲ್ಲಿ ಆ ಸಂದರ್ಭಕ್ಕಾಗುವಾಗ ನಮ್ಮ ದೇಶ ಸೂಪರ್ ಪವರ್ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಮಂಗಳೂರಿನ ಸೈಂಟ್ ಅಲೋಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಇನ್ಫಾರ್ಮೇಶನ್ ಟೆಕ್ನಾಲಜಿಯ ಡೀನ್ ಪ್ರೊ.ಸಂತೋಷ್ ರೆಬೆಲ್ಲೋ ಹೇಳಿದರು.        ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಬಾಗ ಹಾಗೂ ಐಟಿ ಕ್ಲಬ್ ಆಶ್ರಯದಲ್ಲಿ ಬುಧವಾರ ಆಯೋಜಿಸಲಾದ ಟೆಕ್ನೋ ತರಂಗ್ […]

Read More

ಕುರ್ತಕೋಟಿ ಸಾಹಿತ್ಯಲೋಕ ಕಂಡ ಪ್ರತಿಭಾನ್ವಿತ : ಡಾ.ಜಿ.ಬಿ.ಹರೀಶ್

Published Date : Wednesday, 05-02-2014

ಕುರ್ತಕೋಟಿ ಸಾಹಿತ್ಯಲೋಕ ಕಂಡ ಪ್ರತಿಭಾನ್ವಿತ :  ಡಾ.ಜಿ.ಬಿ.ಹರೀಶ್

ಪುತ್ತೂರು: ಕೀರ್ತಿನಾಥ ಕುರ್ತಕೋಟಿಯವರು ಸ್ವಸ್ಥಾನ ಪರಿಚಯವುಳ್ಳ ವಿಮರ್ಶಕರು. ಜೀವನದಲ್ಲಿ ಸಾಹಿತ್ಯ ಕ್ಷೇತ್ರದ ಸಾರ್ಥಕತೆಗಾಗಿ ವೈಯುಕ್ತಿಕ ಜೀವನವನ್ನು ಧಾರೆ ಎರೆದವರು. ಎಂದು ಸಾಹಿತ್ಯ ವಿಮರ್ಶಕ ಡಾಜಿ.ಬಿ.ಹರೀಶ್ ಹೇಳಿದರು. ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ದತ್ತಿ ಉಪನ್ಯಾಸ ಮಾಲೆ-೨ ಕಾರ್‍ಯಕ್ರಮದಲ್ಲಿ ’ಕೀರ್ತಿನಾಥ ಕುರ್ತಕೋಟಿಯವರ ವಿಮರ್ಶೆಯ ಒಳನೋಟಗಳು’ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು. ಕುರ್ತಕೋಟಿಯವರ ಓದಿನಶಕ್ತಿ ಅಪಾರವಾಗಿದ್ದು ಅವರಿಗೆ ಸಾಹಿತ್ಯವೇ ಹೃದಯ ಕಳಶವಾಗಿತ್ತು. ಸ್ವಪ್ರೇರಣೆಯಿಂದ ಹೆಗಲೇರಿದ ಸಾಹಿತ್ಯವನ್ನು  ಸಾಂದರ್ಭಿಕ ಅವಶ್ಯಕತೆಗಳೊಂದಿಗೆ […]

Read More

ಪ್ರಾಕೃತಿಕ ಪರಂಪರೆಯ ರಕ್ಷಣೆ ಅಗತ್ಯ: ಡಾ.ಶ್ರೀಶ ಕುಮಾರ್ ಎಂ.ಕೆ

Published Date : Wednesday, 05-02-2014

ಪ್ರಾಕೃತಿಕ ಪರಂಪರೆಯ ರಕ್ಷಣೆ ಅಗತ್ಯ: ಡಾ.ಶ್ರೀಶ ಕುಮಾರ್ ಎಂ.ಕೆ

ಪುತ್ತೂರು: ಪ್ರಾಕೃತಿಕ ಪರಂಪರೆ ನಮ್ಮ ದೇಶದ ಸಂಪತ್ತು. ಭಾರತೀಯರು ಮೂಲತಃ ಪ್ರಕೃತಿ ಆರಾಧಕರು. ಪ್ರಕೃತಿಯನ್ನು ರಕ್ಷಿಸಲು ನಮ್ಮ ಹಿರಿಯರು ಅದಕ್ಕೆ ದೈವೀಕ ಶಕ್ತಿಯನ್ನು ಕೊಟ್ಟಿದ್ದಾರೆ. ನಮ್ಮ ಜಗತ್ತು ಸೃಷ್ಟಿಯಾದ ದಿನದಿಂದ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳನ್ನು ದೈವ ಸೃಷ್ಠಿಯೆಂದು ಕರೆಯುತ್ತೇವೆ ಎಂದು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಎಂ.ಕೆ ಹೇಳಿದರು.        ಅವರು ಇತ್ತೀಚೆಗೆ ವಿವೇಕಾನಂದ ಕಾಲೇಜಿನಲ್ಲಿ ಹೆರಿಟೇಜ್ ಕ್ಲಬ್‌ನ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಹೆರಿಟೇಜ್ ಮಾದರಿ ತಯಾರಿ ಸ್ಪರ್ಧೆಯ ಬಹುಮಾನ […]

Read More

ವಿವೇಕಾನಂದದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ

Published Date : Wednesday, 05-02-2014

ವಿವೇಕಾನಂದದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ

ಪುತ್ತೂರು: ಪ್ರಪಂಚದಲ್ಲೇ ಅತಿ ದೊಡ್ಡದಾದ ಪ್ರಜಾಪ್ರಭುತ್ವವನ್ನು ಹೊಂದಿದ ಭಾರತದ ಹಿರಿಮೆ ಗರಿಮೆಯನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ಯುವ ಜನಾಂಗದ ಮೇಲಿದೆ. ದೇಶದ ಅಭಿವೃದ್ಧಿಯ ಪಣ ತೊಟ್ಟು ನಾವೆಲ್ಲರೂ ಮುನ್ನಡೆದಾಗ ದೇಶ ಸದೃಢಗೊಳ್ಳುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ ಹೇಳಿದರು.        ಅವರು ಭಾನುವಾರ ಇಲ್ಲಿನ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣಗೈದು ಮಾತನಾಡಿದರು.        ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ […]

Read More