ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ

Published Date : Monday, 03-07-2017

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ಶನಿವಾರ ಅತ್ಯಂತ ಸೌಹಾರ್ದಯುತವಾಗಿ ನಡೆದು ಮಾದರಿಯೆನಿಸಿತು. ಯಾವುದೇ ಆತಂಕ, ಉದ್ವೇಗಕ್ಕೆ ಅವಕಾಶವಿಲ್ಲದಂತೆ ಅವಿರೋಧ ಆಯ್ಕೆ ನಡೆದು ವಿಶೇಷವೆನಿಸಿತು.  ಕಳೆದ ಹಲವಾರು ವರ್ಷಗಳಲ್ಲೇ ಈ ರೀತಿ ಅವಿರೋಧ ಆಯ್ಕೆ ನಡೆದದ್ದು ಇದೇ ಮೊದಲೆನಿಸಿ ದಾಖಲೆಗೆ ಕಾರಣವಾಯಿತು. ಅಧ್ಯಕ್ಷರಾಗಿ ಅಂತಿಮ ಬಿ.ಕಾಂ ಸಿ ವಿಭಾಗದ ಭಗತ್, ಕಾರ್ಯದರ್ಶಿಯಾಗಿ ಅಂತಿಮ ಬಿ.ಎ ಯ ಪಂಕಜ್ ಎ.ಸಿ ಹಾಗೂ ಜತೆ ಕಾರ್ಯದರ್ಶಿಯಾಗಿ ಅಂತಿಮ ಬಿ.ಎಸ್ಸಿ, ಬಿಝೆಡ್‌ಸಿ ಯ ಮೋಕ್ಷಿತಾ ಎಂ ಒಕ್ಕೊರಲ ಆಯ್ಕೆಗೆ […]

Read More

ವಿವೇಕಾನಂದದಲ್ಲಿ ಯಕ್ಷಗಾನ ನಾಟ್ಯ ತರಬೇತಿ ತರಗತಿಗಳ ಉದ್ಘಾಟನೆ

Published Date : Friday, 30-06-2017

ವಿವೇಕಾನಂದದಲ್ಲಿ ಯಕ್ಷಗಾನ ನಾಟ್ಯ ತರಬೇತಿ ತರಗತಿಗಳ ಉದ್ಘಾಟನೆ

ಪುತ್ತೂರು: ಯಕ್ಷಗಾನವನ್ನು ಶೈಕ್ಷಣಿಕ ಪರಿಸರದಲ್ಲಿ ಕಲಿಸುವುದು ಅತ್ಯಂತ ಸ್ವಾಗತಾರ್ಹ ವಿಚಾರ. ವಿವೇಕಾನಂದ ಕಾಲೇಜಿನಲ್ಲಿ ಯಕ್ಷರಂಜಿನಿ ಯಕ್ಷಕಲಾ ಸಂಘ ಸಾಕಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕಾಲೇಜಿಗೆ ಂಆತ್ರ ಸೀಮಿತವಾಗದೆ ನಾನಾ ಕಡೆಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದೆ. ಇದು ನಿಜಕ್ಕೂ ಮೆಚ್ಚುವಂತಹ ವಿಚಾರ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಹೇಳಿದರು.         ಅವರು ಕಾಲೇಜಿನ ಯಕ್ಷರಂಜಿನಿ ಯಕ್ಷಗಾನ ಕಲಾ ಸಂಘದ ನಾಟ್ಯ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.         ಕೆಲವು ಕಲಾವಿದರು ಕುಣಿಯುವಾಗ ಮನಸ್ಸಿಗೆ ಅತೀವ […]

Read More

ದೇವೀರಮ್ಮನಿಗೆ ಅಧ್ಯಾಪಕ ಸಂಘದಿಂದ ಬೀಳ್ಕೊಡುಗೆ – ಸಂದರ್ಭಕ್ಕೆ ಹೊಂದಿಕೊಳ್ಳುವ ಗುಣ ಬೇಕು: ಡಾ.ಪಿ.ಡಬ್ಲ್ಯು. ಪ್ರಭಾಕರ್

Published Date : Friday, 30-06-2017

ದೇವೀರಮ್ಮನಿಗೆ ಅಧ್ಯಾಪಕ ಸಂಘದಿಂದ ಬೀಳ್ಕೊಡುಗೆ - ಸಂದರ್ಭಕ್ಕೆ ಹೊಂದಿಕೊಳ್ಳುವ ಗುಣ ಬೇಕು: ಡಾ.ಪಿ.ಡಬ್ಲ್ಯು. ಪ್ರಭಾಕರ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಿಕೆ ದೇವೀರಮ್ಮ ಜೂನ್ ೩೦ಕ್ಕೆ ನಿವೃತ್ತರಾಗುತ್ತಿರುವ ಹಿನ್ನಲೆಯಲ್ಲಿ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಕಾಲೇಜಿನ ಅಧ್ಯಾಪಕರ ಸಂಘದಿಂದ ಬುಧವಾರ ಹಮ್ಮಿಕೊಳ್ಳಲಾಯಿತು.     ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಸಮಯ, ಅಧಿಕಾರ, ಹಣ ಇವುಗಳು ಮನುಷ್ಯ ದೇಹವನ್ನು ಜೀವನಕ್ಕೆ ಒಗ್ಗಿಕೊಳ್ಳದಂತೆ ಮಾಡಬಹುದು. ಸಂದರ್ಭಕ್ಕೆ ಹೊಂದಿಕೊಂಡು ಹೋಗುವ ಗುಣ, ಮನಸ್ಸು ಎಲ್ಲರಿಗೂ ಇರುವುದಿಲ್ಲ. ನಮ್ಮೊಳಗೆ ಏನೇ ಭಾವನೆಗಳಿದ್ದರೂ ಜೀವನದಲ್ಲಿ ಕೆಲವು ನೀತಿ ನಿಯಮಗಳಿಗೆ ಬದ್ಧರಾಗಿರಲೇ ಬೇಕಾಗುತ್ತದೆ. ದೇವೀರಮ್ಮ […]

Read More

ವಿವೇಕಾನಂದದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ

Published Date : Friday, 30-06-2017

ವಿವೇಕಾನಂದದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರ್ ಮಾತನಾಡಿ ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಸಂಘದ ಬಲವನ್ನು ವೃದ್ಧಿಸುತ್ತದೆ. ಕಾಲೇಜಿನ ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದು ನುಡಿದರು.     ಹಿರಿಯ ವಿದ್ಯಾರ್ಥಿಗಳು ಈಗಿನ ವಿದ್ಯಾರ್ಥಿಗಳೊಡನೆ ಸೇರಿ ಅನೇಕ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕು. ಪರಿಸರ ಪ್ರೀತಿಯ ಕಾರ್ಯಗಳು ಆಗಬೇಕು. ಸಾಂಪ್ರದಾಯಿಕ ಸಸ್ಯಗಳನ್ನು ನೆಡುವುದರ ಬಗೆಗೆ […]

Read More

ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಟಿವೃಕ್ಷ ಆಂದೋಲನಕ್ಕೆ ಭಾರೀ ಜನಮನ್ನಣೆ – ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ದಿನಪೂರ್ತಿ ನಡೆದ ಗಿಡನೆಡುವ ಕಾರ್ಯಕ್ರಮ

Published Date : Saturday, 24-06-2017

ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಟಿವೃಕ್ಷ ಆಂದೋಲನಕ್ಕೆ ಭಾರೀ ಜನಮನ್ನಣೆ - ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ದಿನಪೂರ್ತಿ ನಡೆದ ಗಿಡನೆಡುವ ಕಾರ್ಯಕ್ರಮ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಸಮರ್ಥ ಭಾರತ ಪುತ್ತೂರು ಘಟಕಗಳು ಸಂಯುಕ್ತಾರ್ಶರಯದಲ್ಲಿ ಶುಕ್ರವಾರ ಆಯೋಜನೆ ಮಾಡಿದ ಕೋಟಿವೃಕ್ಷ ಆಂದೋಲನ ಅಭೂತಪೂರ್ವ ಯಶಸ್ಸನ್ನು ದಾಖಲಿಸಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಮುನ್ನಡೆಸುವ ನಾನಾ ವಿದ್ಯಾಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು ಈ ಆಂದೋಲನದಲ್ಲಿ ಭಾಗಿಯಾಗಿ ಪುತ್ತೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಗಿಡನೆಡುವ ಮೂಲಕ ಜಾಗೃತಿ ಮೂಡಿಸಿದರು. ಮುಂದಿನ ತಲೆಮಾರಿಗೆ ಪರಿಸರ ಉಳಿಸುವ ಹಾಗೂ ಬೆಳೆಸುವ ಕಲ್ಪನೆ ನೀಡುವಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಈ ವಿಶೇಷ ಆಂದೋಲನ ಸಹಕಾರಿಯಾಯಿತು.         ವಿವೇಕಾನಂದ […]

Read More

ಅಹಂ ದೂರವಾಗದೆ ಶಿಕ್ಷಣ ಸಾರ್ಥಕವಾಗದು: ಡಾ. ತಾಳ್ತಜೆ

Published Date : Saturday, 24-06-2017

ಅಹಂ ದೂರವಾಗದೆ ಶಿಕ್ಷಣ ಸಾರ್ಥಕವಾಗದು: ಡಾ. ತಾಳ್ತಜೆ

ಪುತ್ತೂರು: ಬದುಕಿನಲ್ಲಿ ಬವಣೆ, ತೊಂದರೆಗಳು ಅನೇಕ. ಅದನ್ನು ಮೀರಿ ಸಾಧನೆ ಅಚ್ಚೊತ್ತಬೇಕು. ಸುಶಿಕ್ಷಿತರೆಲ್ಲರೂ ಸುಸಂಸ್ಕೃತರಾಗಿರಬೇಕಾಗಿಲ್ಲ. ನಾನು ನನ್ನದು ಎಂಬ ಅಹಂ ಬಿಟ್ಟಾಗ ಸುಶಿಕ್ಷಿತ ಸುಸಂಸ್ಕೃತನಾಗುತ್ತಾನೆ. ವ್ಯಾಸಂಗ, ಅಭ್ಯಾಸದೊಡನೆ ಒಳ್ಳೆಯ ಮಾನವರಾಗುವ ಕಡೆಗೆ ಮುನ್ನಡೆಯಬೇಕು. ಎಂದು ಸಾಹಿತಿ, ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.      ಅವರು ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.      ಕಾರ್ಯಕ್ರಮಕ್ಕೆ ಮುಖ್ಯ […]

Read More

ಯೋಗ ಮನಸ್ಸು ಮತ್ತು ದೇಹವನ್ನು ಬೆಸೆಯುವ ಒಂದು ಸಾಧನ: ಡಾ. ಗೌರಿ

Published Date : Friday, 23-06-2017

ಯೋಗ ಮನಸ್ಸು ಮತ್ತು ದೇಹವನ್ನು ಬೆಸೆಯುವ ಒಂದು ಸಾಧನ: ಡಾ. ಗೌರಿ

ಪುತ್ತೂರು: ಯೋಗವೆಂಬ ಪದದ ಮೂಲ ಸಂಸ್ಕೃತದ ಯೂಚ್. ಅಂದರೆ ಜೋಡಣೆ ಎಂದರ್ಥ. ಮನಸ್ಸು ಮತ್ತು ದೇಹಗಳ ಪರಸ್ಪರ ಜೋಡಿಸುವಿಕೆ  ಯೋಗದಿಂದ ಸಾಧ್ಯ. ಯೋಗ ಕಲಿಯಲು ವಯಸ್ಸಿಗಿಂತ ಮನಸ್ಸು ಮುಖ್ಯ. ಒತ್ತಡ ನಿವಾರಣೆಗೆ ಯೋಗ ಒಂದು ಉತ್ತಮ ಔಷಧವಾಗಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿದ್ಯಾಲಯದ ವೈದ್ಯೆ ಡಾ. ಗೌರಿ ಹೇಳಿದರು. ಅವರು ವಿವೇಕಾನಂದ ಕಾಲೇಜಿನ ವತಿಯಿಂದ ಆಯೋಜಿಸಲಾದ ೩ನೇ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು. ಯೋಗ ಅಷ್ಟಾಂಗ ಯೋಗಗಳಾಗಿ […]

Read More

ಪತ್ರಿಕೋದ್ಯಮ ಎಂ.ಎ ಹಾಗೂ ಗಣಿತ ಎಂ.ಎಸ್ಸಿ ಗೆ ಅರ್ಜಿ ಲಭ್ಯ

Published Date : Thursday, 22-06-2017

ಪತ್ರಿಕೋದ್ಯಮ ಎಂ.ಎ ಹಾಗೂ ಗಣಿತ ಎಂ.ಎಸ್ಸಿ ಗೆ ಅರ್ಜಿ ಲಭ್ಯ

ಪ್ರಸ್ತುತ ಶೈಕ್ಷಣಿಕ ವರ್ಷದಿಂದ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಎಂ.ಎ ಹಾಗೂ ಗಣಿತಶಾಸ್ತ್ರ ಎಂ.ಎಸ್ಸಿಗಳು ಪ್ರಾರಂಭಗೊಳ್ಳಲಿವೆ. ಅದಕ್ಕೆ ಸಂಬಂಧಿಸಿದಂತೆ ಅರ್ಜಿ ನಮೂನೆಗಳು ಕಾಲೇಜಿನಲ್ಲಿ ಲಭ್ಯವಿದ್ದು ಆಸಕ್ತರು ಪಡೆದುಕೊಂಡು ಹೋಗುತ್ತಿದ್ದಾರೆ. ಯಾವುದೇ ಪದವಿ ಓದಿದವರೂ ಪತ್ರಿಕೋದ್ಯಮ ಎಂ.ಎ ಗೆ ಅರ್ಜಿ ಸಲ್ಲಿಸಬಹುದು. ಅಂತೆಯೇ ಬಿಎಸ್ಸಿ ಪದವಿ ಓದಿದವರು ಗಣಿತ ಎಂ.ಎಸ್ಸಿಗೆ ಅರ್ಜಿ ಸಲ್ಲಿಸಬಹುದು.

Read More

ವಿವೇಕಾನಂದದಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ – ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುವುದು ಹೆತ್ತವರ ಜವಾಬ್ಧಾರಿ: ವರಲಕ್ಷ್ಮೀ

Published Date : Thursday, 22-06-2017

ವಿವೇಕಾನಂದದಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ - ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುವುದು ಹೆತ್ತವರ ಜವಾಬ್ಧಾರಿ: ವರಲಕ್ಷ್ಮೀ

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜು ಹಾಗೂ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಕಾಲೇಜಿಗೆ  ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುವುದು ಹೆತ್ತವರ ಕರ್ತವ್ಯ ಎಂದರು. ಹೆತ್ತವರು ಮನೆಯಲ್ಲಿ ಟಿವಿ ನೋಡುತ್ತಾ ಮಕ್ಕಳನ್ನು ನೋಡಬೇಡಿ ಎನ್ನುವುದು ಪರಿಣಾಮ ಮಾಡುವುದಿಲ್ಲ. ಬದಲಾಗಿ ಮಕ್ಕಳಿಗಾಗಿ ಹೆತ್ತವರೂ ಟಿ.ವಿ . ನೋಡುವುದನ್ನು ಕಡಿಮೆಗೊಳಿಸಬೇಕು. ನಾವು ನೈತಿಕವಾಗಿ ಗಟ್ಟಿಯಾಗಿದ್ದಲ್ಲಿ ಮಾತ್ರ […]

Read More

ವಿವೇಕಾನಂದದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ – ಕಲೆ, ಸಾಹಿತ್ಯದೆಡೆಗಿನ ಆಸಕ್ತಿ ನಮ್ಮನ್ನು ಬೆಳೆಸುತ್ತದೆ : ಅನಂತಕೃಷ್ಣ ಹೆಬ್ಬಾರ್

Published Date : Tuesday, 21-02-2017

ವಿವೇಕಾನಂದದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ - ಕಲೆ, ಸಾಹಿತ್ಯದೆಡೆಗಿನ ಆಸಕ್ತಿ ನಮ್ಮನ್ನು ಬೆಳೆಸುತ್ತದೆ : ಅನಂತಕೃಷ್ಣ ಹೆಬ್ಬಾರ್

ಪುತ್ತೂರು: ಕಲೆ, ಸಂಸ್ಕೃತಿಯ ಬಗೆಗೆ ಆಸಕ್ತಿ ಇರಬೇಕು. ಹಾಗೆಂದು ಪ್ರತಿಯೊಬ್ಬರೂ ಕಲಾಗಾರರೇ ಆಗಬೇಕೆಂದಿಲ್ಲ. ಅದರೆಡೆಗೆ ವ್ಯಕ್ತಿಯಲ್ಲಿ ಅಡಕವಾಗಿರುವ ಒಲವೇ ವ್ಯಕ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸುತ್ತದೆ. ಜತೆಗೆ ಕಲೆಯೂ ಬೆಳವಣಿಗೆಯನ್ನು ಕಾಣುತ್ತದೆ ಎಂದು ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ, ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಅನಂತ ಕೃಷ್ಣ ಹೆಬ್ಬಾರ್ ಹೇಳಿದರು. ಅವರು ವಿವೇಕಾನಂದ ಕಾಲೇಜಿನಲ್ಲಿ ಶನಿವಾರ ನಡೆದ ಹಿರಿಯ ವಿದ್ಯಾರ್ಥಿಗಳ ದಿನಾಚರಣೆಯಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅನೇಕ ಹೆತ್ತವರಿಗೆ ತಮ್ಮ ಮಕ್ಕಳು ಏನಾಗಬೇಕು ಅಥವ ಯಾರಂತಾಗಬೇಕು […]

Read More