ರಾಮರಕ್ಷಾ ಪಠಣದಿಂದ ಮನಸ್ಸಿಗೆ ನೆಮ್ಮದಿ: ಶಿವರಾಮ ಭಟ್

Published Date : Sunday, 13-08-2017

ರಾಮರಕ್ಷಾ ಪಠಣದಿಂದ ಮನಸ್ಸಿಗೆ ನೆಮ್ಮದಿ:  ಶಿವರಾಮ ಭಟ್

ಪುತ್ತೂರು: ರಾಮರಕ್ಷಾ ರಾಮಾಯಣದ ಮಹತ್ವವನ್ನು ತಿಳಿಸುತ್ತದೆ. ಕರ್ಕಾಟಕ ಮಾಸ ಎಂಬುದು ಬಹಳ ಕಷ್ಟಕರವಾದ ಕಾಲ. ಇದು ರಾಮಾಯಣದ ಮಾಸ ಎಂದೇ ಪ್ರಸಿಧ್ಧವಾಗಿದೆ. ಮನಸ್ಸಿನ ನೆಮ್ಮದಿಗಾಗಿ ರಾಮಾಯಣದ ಪಾರಾಯಣ ಮಾಡಬೇಕು ಎಂದುಸ್ವಗ್ದ ಸ್ವಾಮಿ ವಿವೇಕಾನಂದ ಪಿ. ಯು.ಸಿ. ಕಾಲೇಜಿನ ಸಂಸ್ಕೃತ ಅಧ್ಯಾಪಕ ಶಿವರಾಮ ಭಟ್ ಕೆ. ನುಡಿದರು.           ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಹಾಗೂ ವಿಕಾಸಂ ಸಂಸ್ಕೃತ ಸಂಘದ ವತಿಯಿಂದ ಆಯೋಜಿಸಲಾದ ಶ್ರೀರಾಮರಕ್ಷಾ ಸ್ತೋತ್ರ ಸಹಸ್ರ ಪಠಣದ ಭಗವದರ್ಪಣ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ […]

Read More

ವಿವೇಕಾನಂದದಲ್ಲಿ ಉಪನ್ಯಾಸ ಕಾರ್ಯಕ್ರಮ

Published Date : Sunday, 13-08-2017

ವಿವೇಕಾನಂದದಲ್ಲಿ ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಿಂದ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಂಪೆನಿ ಸೆಕ್ರೆಟರಿ ಕೋರ್ಸ್ ಬಗೆಗಿನ ಮಾಹಿತಿ ಕಾರಾಗಾರವನ್ನು ಇತ್ತೀಚೆಗೆ ಏರ್ಪಡಿಸಲಾಯಿತು. ಇನ್ಸ್ಟಿಟ್ಯೂಶನ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾದ  ಮಂಗಳೂರಿನ ಚಾಪ್ಟರ್‌ನ  ಗೌರವ ಕೌನ್ಸಿಲರ್ ಚಂದ್ರಕಲಾ ಮಾತನಾಡಿ ಕಂಪೆನೀಸ್ ಆಕ್ಟ್ ೨೦೧೩ರ ಪ್ರಕಾರ ಪ್ರತೀ ಕಂಪೆನಿಯಲ್ಲಿ ಕಂಪೆನಿ ಸೆಕ್ರೆಟರಿ ಹುದ್ದೆ ಇರಬೇಕು. ಇದರಲ್ಲಿ ಫೌಂಡೇಶನ್ ಪ್ರೋಗ್ರಾಮ್, ಪ್ರೊಫೆಶನಲ್ ಪ್ರೊಗ್ರಾಮ್, ಎಕ್ಸಿಕ್ಯೂಟೀವ್ ಪ್ರೋಗ್ರಾಮ್‌ಗಳೆಂಬ ವಿಧಗಳಿವೆ ಎಂದರಲ್ಲದೆ ಪ್ರತಿ ಪ್ರೊಗ್ರಾಮ್‌ನಲ್ಲಿ ಬರುವ ವಿಷಯಗಳು ರಿಜಿಸ್ಟ್ರೇಶನ್ ಪ್ರೊಸೆಸ್, ಎಕ್ಸಾಮಿನೇಶನ್ ಸಿಸ್ಸಟಮ್, […]

Read More

ದೈವಾರಾಧನೆ ಸರ್ವ ಜನಾಂಗದ ಸಮ್ಮಿಳಿತ : ಮನ್ಮಥ ಶೆಟ್ಟಿ

Published Date : Sunday, 13-08-2017

ದೈವಾರಾಧನೆ ಸರ್ವ ಜನಾಂಗದ ಸಮ್ಮಿಳಿತ : ಮನ್ಮಥ ಶೆಟ್ಟಿ

ಪುತ್ತೂರು: ದೈವಾರಾಧನೆ ಎಂಬುದು ತುಳುನಾಡಿನ ಪ್ರತಿ ಸಮುದಾಯದ ಭಾಗವಹಿಸುವಿಕೆಯನ್ನೂ ಒಳಗೊಂಡಿದೆ. ಇಲ್ಲಿ  ಜಾತಿ ಧರ್ಮ ಜನಾಂಗದ ಪ್ರಶ್ನೆ ಬರುವುದಿಲ್ಲ.  ಎಲ್ಲರೂ ಒಂದಾಗಿ ತಮಗಾಗಿ ಪರಂಪರೆ ಕಾಯ್ದಿರಿಸಿದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ ಎಂದು ಕೊಡಿಪ್ಪಾಡಿ ದೈವಾರಾಧನ ಕೂಟದ ಸಂಚಾಲಕ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗ, ಪಾರಂಪರಿಕ ಕೂಟ ಹಾಗೂ ತುಳು  ಸಂಘಗಳು ಜಂಟಿಯಾಗಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದೈವಾರಾಧನೆಯ ಕುರಿತು ಮಂಗಳವಾರ  ಮಾತನಾಡಿದರು. ನಾಗಾರಾಧನೆಯೂ ಈ ತುಳುನಾಡಿನ ಆರಾಧನೆಗಳಲ್ಲಿ ಒಂದು. […]

Read More

ವಿದ್ಯಾರ್ಥಿ ಜೀವನದ ಸದ್ಬಳಕೆಯಿಂದ ಭವಿಷ್ಯ ಸುಭದ್ರ: ಚೇತನ್ ನಾಯಕ್

Published Date : Sunday, 13-08-2017

ವಿದ್ಯಾರ್ಥಿ ಜೀವನದ ಸದ್ಬಳಕೆಯಿಂದ ಭವಿಷ್ಯ ಸುಭದ್ರ: ಚೇತನ್ ನಾಯಕ್

ಪುತ್ತೂರು: ವಿದ್ಯಾರ್ಥಿಯಾದವನು ಕಾಲೇಜು ಜೀವನವನ್ನು ಸರಿಯಾದ ರೀತಿಯನ್ನು ಬಳಕೆ ಮಾಡಿಕೊಂಡರೆ ಭವಿಷ್ಯದ ಬದುಕಿಗೆ ಭದ್ರ ತಳಪಾಯವನ್ನು ಹಾಕುವುದಕ್ಕೆ ಸಾಧ್ಯ. ಆದ್ದರಿಂದ ಶೈಕ್ಷಣಿಕ ಬದುಕನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗು ಮುಂದುವರಿಯಬೇಕು ಎಂದು ಮಂಗಳೂರಿನ ಖಾಸಗಿ ಕಂಪೆನಿಯ ಕಾರ್ಯದರ್ಶಿ ಚೇತನ್ ನಾಯಕ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ವಾಣಿಜ್ಯ ಮತ್ತು ವ್ಯವಹಾರ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ  ಗುರುವಾರ ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ವಾಣಿಜ್ಯ ಮತ್ತು ವ್ಯವಹಾರ ವಿಷಯಗಳನ್ನು ಅಧ್ಯಯನ ಮಾಡಿದವರಿಗೆ […]

Read More

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾಂತ್ರೀಕರಣಕ್ಕೆ ಆದ್ಯತೆ : ಕೇಶವ ಮೂರ್ತಿ

Published Date : Sunday, 13-08-2017

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾಂತ್ರೀಕರಣಕ್ಕೆ ಆದ್ಯತೆ : ಕೇಶವ ಮೂರ್ತಿ

ಪುತ್ತೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಯಾಂತ್ರೀಕರಣ ಇತ್ತೀಚೆಗಿನ ಕಾಲದ ಮಹತ್ತರವಾದ ಬೆಳವಣಿಗೆ. ಇದು ಸಮಯ ಮತ್ತು ವೆಚ್ಚಗಳ ಉಳಿತಾಯದ ಜತೆಗೆ ಗುಣಮಟ್ಟದ ತಂತ್ರಾಂಶಗಳ ತಯಾರಿಕೆಗೆ ಸಹಕಾರಿ ಎಂದು ಬೆಂಗಳೂರಿನ ಖಾಸಗಿ ಕಂಪೆನಿಯ ಪ್ರಾಜೆಕ್ಟ್ ಮ್ಯಾನೇಜರ್ ಕೇಶವಮೂರ್ತಿ ಹೇಳಿದರು.         ಅವರು ಇಲ್ಲಿನ ವಿವೇಕಾನಂದ ಖಾಲೇಜಿನ ಐ.ಟಿ. ಕ್ಲಬ್ ವತಿಯಿಂದ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಫ್ಟ್‌ವೇರ್ ಅಟೊಮೇಶನ್ ಎಂಬ ವಿಷಯದ ಬಗೆಗೆ ಮಂಗಳವಾರ ಮಾತನಾಡಿದರು.         ವಿದ್ಯಾರ್ಥಿ ದೆಸೆಯಿಂದಲೇ ಹೊಸ ಹೊಸ ತಂತ್ರಾಂಶಗಳನ್ನು ಹಾಗೂ ತಂತ್ರಜ್ಞಾನಗಳನ್ನು ಕಲಿಯುವುದು […]

Read More

ಸುಳ್ಳೇ ಜೀವನವಾಗದಿರಲಿ : ಡಾ. ವಿಷ್ಣುಕುಮಾರ್

Published Date : Sunday, 13-08-2017

ಸುಳ್ಳೇ ಜೀವನವಾಗದಿರಲಿ : ಡಾ. ವಿಷ್ಣುಕುಮಾರ್

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ನಾವು ಅನೇಕ ಸುಳ್ಳುಗಳನ್ನು ಹೇಳಿರುತ್ತೇವೆ. ಜೀವನದಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಸುಳ್ಳು ಹೇಳುವುದು ಅಪರಾಧವಲ್ಲ. ಆದರೆ ಸುಳ್ಳೇ ಜೀವನವಾಗದಿರಲಿ. ಸುಳ್ಳು ಹೇಳುವ ಮೊದಲು ಸಮಯ ಸಂದರ್ಭ ನೆನಪಿನಲ್ಲಿರಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ವಿಷ್ಣುಕುಮಾರ್ ಹೇಳಿದರು. ಅವರು ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಒಂದು ಸುಳ್ಳಿನ ಕಥೆ ಎಂಬ ವಿಷಯದ ಕುರಿತು ಬುಧವಾರ ಮಾತನಾಡಿದರು. ಗಂಭೀರ ವಿಷಯಗಳಿಗೆ ತಮಾಷೆಯ […]

Read More

ಮಾನ್ಸೂನ್ ಚೆಸ್ ಪಂದ್ಯಾಟ

Published Date : Friday, 28-07-2017

ಮಾನ್ಸೂನ್ ಚೆಸ್ ಪಂದ್ಯಾಟ

ಪುತ್ತೂರು : ವಿವೇಕಾನಂದ ಕಾಲೇಜು. ಪುತ್ತೂರು ಇದರ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ 38ನೇ ಮಾನ್‌ಸೂನ್ ಚೆಸ್ ಪಂದ್ಯಾಟವು ಇದೇ ಆಗಸ್ಟ್  ೦3, ೦4 ಮತ್ತು ೦5, 2017 ರಂದು ಕಾಲೇಜಿನ ಸುವರ್ಣಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯ ವ್ಯಾಪ್ತಿಗೊಳಪಟ್ಟ ಎಲ್ಲಾ ಪದವಿ ಕಾಲೇಜು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಇದರಲ್ಲಿ ಭಾಗವಹಿಸಲು ಅವಕಾಶವಿದೆ. ಪಂದ್ಯಾಟವನ್ನು ಶ್ರೀ ಗಣೇಶ್ ಕೊಟ್ಯಾನ್. ದೈಹಿಕ ಶಿಕ್ಷಣ ನಿರ್ದೇಶಕರು, ಉಪೇಂದ್ರ ಪೈ ಸ್ಮಾರಕ ಕಾಲೇಜು, […]

Read More

ಸಂಶೋಧಕನಿಗೆ ಶಿಶು ಸಹಜ ಕುತೂಹಲವಿರಬೇಕು : ಡಾ. ತಾಳ್ತಜೆ

Published Date : Friday, 28-07-2017

ಸಂಶೋಧಕನಿಗೆ ಶಿಶು ಸಹಜ ಕುತೂಹಲವಿರಬೇಕು : ಡಾ. ತಾಳ್ತಜೆ

ಪುತ್ತೂರು : ಮಗು ಪ್ರಶ್ನೆಗಳ ಮೂಲಕ ತನ್ನ ಕುತೂಹಲಗಳನ್ನು ತಣಿಸಿಕೊಳ್ಳುತ್ತದೆ. ಬೆಳೆಯುತ್ತಾ ಹೋದಂತೆ ಈ ಸ್ವಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಸಂಶೋಧಕನಾದವನಿಗೆ ಶಿಶು ಸಹಜ ಕುತೂಹಲವಿರಬೇಕು. ಅದರಿಂದ ವಿಷಯಗಳ ಬಗೆಗೆ ನಮಗೆ ಮೂಡುವ ಆಸಕ್ತಿ ನಮ್ಮನ್ನು ಸಂಶೋಧನಾ ಕಾರ್ಯಕ್ಕೆ ಪ್ರೇರೇಪಿಸುತ್ತದೆ ಎಂದು ಸಾಹಿತಿ, ಸಂಶೋಧಕ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.          ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸಂಶೋಧನಾ ಮಾರ್ಗದರ್ಶನ ಕೇಂದ್ರ, ಇತಿಹಾಸ ಸಂಸೃತಿ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಹಾಗೂ ಕನ್ನಡ ಸಂಘ ಜಂಟಿಯಾಗಿ ಕಲಾ  […]

Read More

ವಿವೇಕಾನಂದದಲ್ಲಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆ ಉದ್ಘಾಟನೆ

Published Date : Friday, 28-07-2017

ವಿವೇಕಾನಂದದಲ್ಲಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆ ಉದ್ಘಾಟನೆ

ಪುತ್ತೂರು: ಸಾಧನೆಯೆಡೆಗೆ ಹೆಜ್ಜೆ ಇಡುವವನಿಗೆ ಸವಾಲುಗಳು ಸಹಜ. ಆದರೆ ಅವುಗಳನ್ನು ಎದುರಿಸಿ ಮುನ್ನೆಡೆದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಸವಾಲುಗಳಿಗೆ ಬೆನ್ನು ಹಾಕುವವನು ಏನನ್ನೂ ಸಾಕಾರಗೊಳಿಸಲಾರ. ಸೋಲೇ ಗೆಲುವಿನ ಸೋಪಾನ ಅನ್ನುವ ಬೀಜಮಂತ್ರ. ನಮ್ಮನ್ನು ಮತ್ತೆ ಮತ್ತೆ ಪ್ರೇರೇಪಿಸಬಲ್ಲುದು ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ಅಭ್ಯರ್ಥಿ ಶ್ರೀಶ ಭಟ್ ಹೇಳಿದರು.         ಅವರು ವಿವೇಕಾನಂದ ಕಾಲೇಜಿನ ವಿಜ್ಞಾನ ವಿಭಾಗಗಳ ಆಶ್ರಯದಲ್ಲಿ ಆಯೋಜಿಸಲಾದ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.         […]

Read More

ಸಾಹಿತ್ಯ ಚಟುವಟಿಕೆಗಳಿಂದ ಬದುಕಿಗೊಂದು ಪರಿಪೂರ್ಣತೆ : ಹರಿಣಿ

Published Date : Friday, 28-07-2017

ಸಾಹಿತ್ಯ ಚಟುವಟಿಕೆಗಳಿಂದ ಬದುಕಿಗೊಂದು ಪರಿಪೂರ್ಣತೆ : ಹರಿಣಿ

ಪುತ್ತೂರು : ಕೇವಲ ಅಂಕವೊಂದಿದ್ದರೆ ಬದುಕಿಗೆ ಸಾಕಗುವುದಿಲ್ಲ. ಜೀವನ ಸಾಗಿಸಲು ಅನುಭವವೂ ಬೇಕಾಗುತ್ತದೆ. ವಿದ್ಯಾರ್ಥಿ ಜೀವನ ಕೇವಲ ಪಠ್ಯಕ್ಕೆ ಸೀಮಿತಗೊಳ್ಳಬಾರದು. ಸಾಹಿತ್ಯ ರಚನೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಬದುಕನ್ನು ಪರಿಪೂರ್ಣತೆಯತ್ತ ಕೊಂಡೊಯ್ಯಲು ಸಾಧ್ಯ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಗಣಕಶಾಸ್ತ್ರ ಉಪನ್ಯಾಸಕಿ ಹರಿಣಿ ಪುತ್ತೂರಾಯ ಹೇಳಿದರು. ಅವರು ಕಾಲೇಜಿನ ತೃತೀಯ ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಸಾಹಿತ್ಯ ಮಂಟಪ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪಾಲ್ಗೊಂಡು ಮಂಗಳವಾರ ಮಾತನಾಡಿದರು.     ನಮ್ಮ ನೈಪುಣ್ಯತೆಯನ್ನು […]

Read More