ಡಾ. ರೋಹಿಣಾಕ್ಷ ಶಿರ್ಲಾಲು ಕೃತಿಗೆ ಬೇಂದ್ರೆ ಗ್ರಂಥ ಪುರಸ್ಕಾರ

Published Date : Thursday, 19-01-2017

ಡಾ. ರೋಹಿಣಾಕ್ಷ ಶಿರ್ಲಾಲು ಕೃತಿಗೆ ಬೇಂದ್ರೆ ಗ್ರಂಥ ಪುರಸ್ಕಾರ

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ.ರೋಹಿಣಾಕ್ಷ ಶಿರ್ಲಾಲು ಅವರ ಚೊಚ್ಚಲ  ಕೃತಿ ’ ಸಾಹಿತ್ಯ ವಿಚಾರ’ ದಾರವಾಡದ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ  ಪ್ರತಿಷ್ಠಿತ ’ಬೇಂದ್ರೆ ಗ್ರಂಥ ಪುರಸ್ಕಾರ’ಕ್ಕೆ ಆಯ್ಕೆಯಾಗಿದೆ. ಸಂಶೋಧನೆ, ನಾಟಕ, ಕಾವ್ಯ ಮೊದಲಾದ ಎಂಟು ಪ್ರಕಾರದ ಸಾಹಿತ್ಯಕ್ಕೆ ನೀಡುವ ಈ ಪ್ರಶಸ್ತಿಯು, ಸಂಶೋದನಾ ಪ್ರಕಾರದಲ್ಲಿ ’ಸಾಹಿತ್ಯ ವಿಚಾರ’ ಕೃತಿಯು ಪುರಸ್ಕಾರಕ್ಕೆ ಪಾತ್ರವಾಗಿದೆ. ೨೦೧೫ರಲ್ಲಿ ಪ್ರಕಟವಾದ ಕನ್ನಡ ಕೃತಿಗಳಲ್ಲಿ ಪ್ರಸ್ತುತ ಕೃತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಕೃತಿಯು ಪ್ರಾಚೀನ ಸಾಹಿತ್ಯ, ಸಾಹಿತ್ಯ […]

Read More

ಕೌಶಲ್ಯಾಭಿವೃದ್ಧಿ ಒಂದು ರಾಷ್ಟ್ರೀಯ ಆಂದೋಲನ: ರಾಜೀವ್ ಪ್ರತಾಪ್ ರೂಢಿ

Published Date : Thursday, 19-01-2017

ಕೌಶಲ್ಯಾಭಿವೃದ್ಧಿ ಒಂದು ರಾಷ್ಟ್ರೀಯ ಆಂದೋಲನ: ರಾಜೀವ್ ಪ್ರತಾಪ್ ರೂಢಿ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ನೆಹರುನಗರದ ವಿವೇಕಾನಂದ ಕ್ಯಾಂಪಸ್‌ನಲ್ಲಿ ಆಯೋಜಿಸಿದ ಬೃಹತ್ ಉದ್ಯೋಗ ಮೇಳದ ಉದ್ಘಾಟನೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ರಾಜೀವ್ ಪ್ರತಾಪ್ ರೂಢಿಯವರನ್ನು ಆಹ್ವಾನಿಸಲಾಗಿತ್ತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಸಂಜೆ ಸಚಿವ ಸಂಪುಟ ಸಭೆ ಕರೆದಿರುವ ಹಿನ್ನಲೆಯಲ್ಲಿ ಅವರಿಗೆ ಉದ್ಯೋಗ ಮೇಳಕ್ಕೆ ಬರಲಾಗಿರಲಿಲ್ಲ. ಆದರೆ ಸ್ಕೈಪ್ ಮೂಲಕ ಉದ್ಯೋಗ ಮೇಳಕ್ಕೆ ಆಗಮಿಸಿದ್ದ ನೆರೆದವರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ದೇಶದಲ್ಲಿ ಕಂಪ್ಯೂಟರ್‌ಗಳು ಬರಲಾರಂಭಿಸಿದ ಹೊತ್ತಿಗೆ ಅವು ಉದ್ಯೋಗಗಳನ್ನು ಕಡಿತಗೊಳಿಸುತ್ತವೆ […]

Read More

ರೇಡಿಯೋ ಪಾಂಚಜನ್ಯ ಲೋಕಾರ್ಪಣೆ – ಪಾಂಚಜನ್ಯದ ಹೆಸರೇ ರೋಮಾಂಚನಕಾರಿ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Published Date : Thursday, 19-01-2017

ರೇಡಿಯೋ ಪಾಂಚಜನ್ಯ ಲೋಕಾರ್ಪಣೆ - ಪಾಂಚಜನ್ಯದ ಹೆಸರೇ ರೋಮಾಂಚನಕಾರಿ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಪುತ್ತೂರು : ಪಾಂಚಜನ್ಯದ ಹೆಸರನ್ನು ಕೇಳುವಾಗ ಭಗವಾನ್ ಶ್ರೀಕೃಷ್ಣ ಅಂತರಂಗಕ್ಕೆ ಬರುತ್ತಾನೆ. ಅಂತಹ ಪವಿತ್ರವಾದ ಹೆಸರದು. ಅದನ್ನು ಕೇಳುವಾಗ ದೈವಿಕವಾದ ಅನುಭವವೊಂದು ನಮ್ಮದಾಗುತ್ತದೆ. ಹೀಗಿರುವಾಗ ಅದೇ ಹೆಸರಿನಲ್ಲಿ ಬಾನುಲಿ ಕೇಂದ್ರವೊಂದನ್ನು ಪ್ರಾರಂಭಿಸಿರುವುದು ರೊಮಾಂಚನಕಾರಿ ಸಂಗತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನ್ನ ಮನ್ ಕಿ ಬಾತ್ ಮುಖೇನ ಜನಮನವನ್ನು ತಲುಪುತ್ತಿದ್ದಾರೆ. ಈಗ ಈ ಭಾಗದ ಸುತ್ತಮುತ್ತಲಿನ ಮಂದಿಯೂ ತಮ್ಮ ಮನದ ಮಾತುಗಳನ್ನು ಈ ಬಾನುಲಿ ಕೇಂದ್ರದ ಮೂಲಕ ಹೇಳುವುದಕ್ಕೆ ಸಾಧ್ಯ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ […]

Read More

ಭಗವದ್ಗೀತೆಯು ಶಾಸ್ತ್ರ ಉಪನಿಷತ್ತುಗಳ ಸಾರ : ವಿದ್ವಾನ್ ರಮೇಶ ಜೋಯಿಸ

Published Date : Friday, 06-01-2017

ಭಗವದ್ಗೀತೆಯು ಶಾಸ್ತ್ರ ಉಪನಿಷತ್ತುಗಳ ಸಾರ : ವಿದ್ವಾನ್  ರಮೇಶ ಜೋಯಿಸ

ಪುತ್ತೂರು: ಮನುಷ್ಯನಿಗೆ ಸಂಸ್ಕಾರ ದೊರೆತಾಗ ಮಾತ್ರ ಅವನು ಪರಿಪೂರ್ಣ ಮಾನವನಾಗುತ್ತಾನೆ. ಭಗವದ್ಗೀತೆಯ ಅಧ್ಯಯನದಿಂದ ಸಂಸ್ಕಾರ ದೊರೆಯುತ್ತದೆ. ಜೀವನದ ನಿಯಮಗಳನ್ನು ತಿಳಿಯಲು ಸಂಸ್ಕಾರ ಅಗತ್ಯ. ಮಾತ್ರವಲ್ಲದೇ ಇದರಿಂದ ಧರ್ಮಾಚರಣೆಯು ಸಾಧ್ಯ. ಧರ್ಮದಿಂದ ಜೀವನ ಸಾರ್ಥಕವಾಗುತ್ತದೆ. ಇವೆಲ್ಲವುಗಳಿಗೆ ಭಗವದ್ಗೀತೆಯ ಪಠಣ ಅವಶ್ಯಕ. ಯುವಜನರು ಭಗವದ್ಗೀತೆಯ ಅಧ್ಯಯನ ಮಾಡಬೇಕು  ಎಂದು ಪಣಂಬೂರಿನ ಎನ್.ಎಂ.ಪಿ.ಟಿ. ಹೈಸ್ಕೂಲ್‌ನ ಸಂಸ್ಕೃತ ಅಧ್ಯಾಪಕ ವಿದ್ವಾನ್ ರಮೇಶ ಜೋಯಿಸ  ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮತ್ತು ವಿಕಾಸಂ ಸಂಸ್ಕೃತ ಸಂಘದ ಐಕ್ಯುಎಸಿ ಆಶ್ರಯದಲ್ಲಿ  ನಡೆದ […]

Read More

ವಿವೇಕಾನಂದ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

Published Date : Friday, 06-01-2017

ವಿವೇಕಾನಂದ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

ಪುತ್ತೂರು:ವಿವೇಕಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಇಲ್ಲಿನ ಕೊಡಿಪ್ಪಾಡಿ ಗ್ರಾಮದ ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡಿತು. ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಘೋಷಣೆಯಡಿ ಆರಂಭಗೊಂಡ ಈ ಶಿಬಿರವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಉದ್ಘಾಟಿಸಿದರು.           ಭಾರತವು ಕೃಷಿ ಪ್ರಧಾನ ದೇಶ. ಆದಾಗ್ಯೂ ಈ ದಿನಗಳಲ್ಲಿ ಜನ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಹೀಗಿರುವಾಗ ವಿದ್ಯಾರ್ಥಿಗಳು ಹಳ್ಳಿಯೊಂದರ ಶಾಲೆಯಲ್ಲಿ ವಾರಪೂರ್ತಿ ಸಮಯ ವಿನಿಯೋಗಿಸಲು ಆಸಕ್ತಿ ವಹಿಸಿರುವುದು […]

Read More

ವಿವೇಕಾನಂದ ಕ್ಯಾಂಪಸ್ನಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಸಿದ್ಧತೆ – ಮುನ್ನೂರಕ್ಕೂ ಅಧಿಕ ಕಂಪೆನಿಗಳ ಸಂಪರ್ಕ ; ನೋಂದಾವಣೆ ಆರಂಭ

Published Date : Friday, 16-12-2016

ವಿವೇಕಾನಂದ ಕ್ಯಾಂಪಸ್ನಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಸಿದ್ಧತೆ - ಮುನ್ನೂರಕ್ಕೂ ಅಧಿಕ ಕಂಪೆನಿಗಳ ಸಂಪರ್ಕ ; ನೋಂದಾವಣೆ ಆರಂಭ

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಇದೇ ಪ್ರಥಮ ಬಾರಿಗೆ ನೆಹರು ನಗರದ ತನ್ನ ವಿಶಾಲ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳವೊಂದನ್ನು ಆಯೋಜಿಸುತ್ತಿದೆ. ಗ್ರಾಮೀಣ ಪ್ರದೇಶದ ಯುವ ಸಮೂಹ ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ಲಕ್ಷಯದಲ್ಲಿರಿಸಿ ಈ ಔದ್ಯೋಗಿಕ ಮೇಳವನ್ನು ರೂಪಿಸಲಾಗಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಮೂಲ ಆಶಯವಾದ ಗ್ರಾಮಾಭಿವೃದ್ಧಿಯ ಕನಸು ಈ ಉದ್ಯೋಗ ಮೇಳದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಈ ಶಿಕ್ಷಣ ಕೇಂದ್ರ ವಿವಿಧ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಸಮಗ್ರ ಅಭ್ಯುದಯಕ್ಕೆ ಪಣ ತೊಟ್ಟು […]

Read More

ವಿವೇಕಾನಂದ ಎಂ.ಕಾಂ ನಲ್ಲಿ ಲಕ್ಷ್ಯ – 2016 ಸಮಾರೋಪ

Published Date : Friday, 16-12-2016

ವಿವೇಕಾನಂದ ಎಂ.ಕಾಂ ನಲ್ಲಿ ಲಕ್ಷ್ಯ - 2016 ಸಮಾರೋಪ

ಪುತ್ತೂರು: ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸುವ ಬಗೆಗೆ ತೀವ್ರ ಲಕ್ಷ್ಯವಿರುವುದು ಸಹಜ. ಆದರೆ ಸ್ಪಧೆಗಳಲ್ಲಿ ಭಾಗವಹಿಸಿದವರೆಲ್ಲರೂ ವಿಜಯಿಗಳಾಗುವುದಿಲ್ಲ ಎಂಬುದೂ ಸತ್ಯ. ಹಾಗಾಗಿ ಸ್ಪಧೆಗಳಲ್ಲಿ ಭಾಗವಹಿಸುವಾಗ ಅನುಭವ ಪಡೆಯುವ ಉದ್ದೇಶವನ್ನೂ ಹೊಂದಿರಬೇಕು. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಆ ಅನುಭವವನ್ನು ಬಳಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹೇಳಿದರು. ಅವರು ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಅಂತಿಮ ಎಂ.ಕಾಂ. ವಿದ್ಯಾರ್ಥಿಗಳು ಆಯೋಜಿಸಿದ ಅಂತರ್ ತರಗತಿ ಸ್ಪರ್ಧೆ ಲಕ್ಷ್ಯ-೨೦೧೬ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ […]

Read More

ಕುಡಿಪಾಡಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ ಉದ್ಘಾಟನೆ – ಸಮಗ್ರ ಅಭಿವೃದ್ಧಿ ಮತ್ತು ಆರೋಗ್ಯ ಇಂದಿನ ಅಗತ್ಯ : ಡಾ.ಕೃಷ್ಣ ಭಟ್

Published Date : Friday, 16-12-2016

ಕುಡಿಪಾಡಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ ಉದ್ಘಾಟನೆ - ಸಮಗ್ರ ಅಭಿವೃದ್ಧಿ ಮತ್ತು ಆರೋಗ್ಯ ಇಂದಿನ ಅಗತ್ಯ : ಡಾ.ಕೃಷ್ಣ ಭಟ್

ಪುತ್ತೂರು: ಸಾಮಾನ್ಯವಾಗಿ ಜನ ವೈಯಕ್ತಿಕ ಆರೋಗ್ಯದ ಬಗೆಗೆ ಅತೀವ ಚಿಂತನೆ ನಡೆಸುತ್ತಾರೆ. ಆದರೆ ನಮ್ಮ ನಮ್ಮ ದೇಹಾರೋಗ್ಯದ ಜತೆಗೆ ಸಾಮಾಜಿಕ, ಸಾಂಸ್ಕೃತಿಕ, ಸಾಮುದಾಯಿಕ ಆರೋಗ್ಯವೂ ಅತ್ಯಂತ ಅಗತ್ಯ. ಹಾಗಾದಾಗ ಮಾತ್ರ ದೇಶ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು. ಅವರು ವಿವೇಕಾನಂದ ಕಾಲೇಜು ದತ್ತು ಸ್ವೀಕರಿಸಿರುವ ಕುಡಿಪಾಡಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಿಕಾಸ ಸಮಿತಿ, ವಿವೇಕಾನಂದ ಕಾಲೇಜು, ರೋವರ್‍ಸ್ ಅಂಡ್ ರೇಂಜರ್‍ಸ್ ಘಟಕ, ರೋಟರಿ ಕ್ಲಬ್, ರೆಡ್ […]

Read More

ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭೆಯ ಅನಾವರಣ ಅವಶ್ಯಕ : ಪ್ರೊ. ಕೆ.ಕೇಶವ ಶರ್ಮ

Published Date : Monday, 03-10-2016

ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭೆಯ ಅನಾವರಣ ಅವಶ್ಯಕ : ಪ್ರೊ. ಕೆ.ಕೇಶವ ಶರ್ಮ

ಪುತ್ತೂರು : ಪ್ರತಿಭೆ  ಪ್ರಭೆಯ ಪ್ರಕಾರ.  ಸೂಕ್ತ ಅವಕಾಶಗಳಿದ್ದಲ್ಲಿ  ಪ್ರತಿಭಾವಂತರು ಪ್ರಕಾಶಿಸುತ್ತಾರೆ.  ಅದನ್ನು ಗುರುತಿಸುವ ಅಗತ್ಯವಿದೆ.  ಪ್ರಯತ್ನದಿಂದಲೇ ಪ್ರತಿಭೆ ಸಾಕಾರವಾಗಲು ಸಾಧ್ಯ್ಲ. ಅಲ್ಲದೇ ಸಮಾಜದಲ್ಲಿ ಪ್ರತೀ ಹಂತದಲ್ಲೂ ಸ್ಪರ್ಧೆಯಿದೆ. ಹುಟ್ಟಿನಿಂದಲೇ ಪ್ರತಿಯೊಬ್ಬರೂ ಸ್ಪರ್ಧೆಗೆ ನಿಲ್ಲಬೇಕಾದ ಅವಶ್ಯಕತೆಯಿದೆ. ಇದನ್ನು ಸಮರ್ಥ ರೀತಿಯಲ್ಲಿ  ಎದುರಿಸಿ ಮುನ್ನಡೆಯಬೇಕು.  ಇದಕ್ಕೆ ನಿರಂತರವಾದ ಕಲಿಕೆ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಸಾಧಿಸುವ ಛಲವಿರಬೇಕು ಎಂದು ಪೆರ್ಲದ ನಾಲಂದ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಪ್ರೊ.ಕೆ.ಕೇಶವ ಶರ್ಮ ಹೇಳಿದರು.   ಅವರು ಇಲ್ಲಿನ ವಿವೇಕಾನಂದ ಕಾಲೇಜಿನ […]

Read More

ಪತ್ರಿಕೋದ್ಯಮ ಮತ್ತು ಭಾಷೆ ವಿಷಯದ ಬಗೆಗಿನ ಕಾರ್ಯಾಗಾರ ಉದ್ಘಾಟನೆ – ಇಂಗ್ಲಿಷ್ ಭಾಷೆಯ ಬಗೆಗೆ ತಪ್ಪು ಕಲ್ಪನೆಗಳಿವೆ : ಡಾ.ಮಾಧವ ಭಟ್

Published Date : Monday, 03-10-2016

ಪತ್ರಿಕೋದ್ಯಮ ಮತ್ತು ಭಾಷೆ ವಿಷಯದ ಬಗೆಗಿನ ಕಾರ್ಯಾಗಾರ ಉದ್ಘಾಟನೆ - ಇಂಗ್ಲಿಷ್ ಭಾಷೆಯ ಬಗೆಗೆ ತಪ್ಪು ಕಲ್ಪನೆಗಳಿವೆ : ಡಾ.ಮಾಧವ ಭಟ್

ಪುತ್ತೂರು: ಇಂಗ್ಲಿಷ್ ಭಾಷೆಯ ಬಗೆಗೆ ಅನೇಕ ತಪ್ಪು ಕಲ್ಪನೆಗಳಿವೆ. ನಿಜವಾಗಿ ನೋಡಿದರೆ ಅದೊಂದು ಕಲಿಕಾ ಸ್ನೇಹಿ ಭಾಷೆ. ಪತ್ರಕರ್ತರಾಗುವವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯ ಬಳಕೆಯ ಬಗೆಗೆ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಭಾಷೆ ಉತ್ಕೃಷ್ಟವಾದಷ್ಟೂ ಬರವಣಿಗೆಯ ಮೌಲ್ಯ ಹೆಚ್ಚುತ್ತದೆ ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗವು ತನ್ನ ದಶಮಾನೋತ್ಸವ ಆಚರಣೆಯ ಪ್ರಯುಕ್ತ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ ಪತ್ರಿಕೋದ್ಯಮ ಮತ್ತು ಭಾಷೆ ಎಂಬ ವಿಚಾರದ ಬಗೆಗಿನ ವಿಚಾರಗೋಷ್ಠಿಯಲ್ಲಿ […]

Read More