ಪ್ರಕೃತಿಯ ಆರಾಧನೆ ಆಧುನಿಕ ಸಮಾಜದ ಅಗತ್ಯಗಳಲ್ಲೊಂದು: ಈಶ್ವರ ಪ್ರಸಾದ್

ಪುತ್ತೂರು: ನಮ್ಮ ಹಿಂದಿನ ಪೀಳಿಗೆ ಪರಿಸರ ಆರಾಧನೆಯ ಬಗೆಗೆ ನಮಗೆ ತಿಳಿಸಿಕೊಟ್ಟಿದೆ. ಆದರೆ ಬರಬರುತ್ತಾ ನಾವು ಆ ವಿಚಾರಧಾರೆಗಳನ್ನು ಮರೆತು ವ್ಯವಹರಿಸಲಾರಂಭಿಸಿದ್ದೇವೆ. ಹಿಂದಿನ ಆರಾಧನೆಗಳು ನಮ್ಮಲ್ಲಿ ಪುನಃ ಬೆಳೆಯಬೇಕು. ಮೂವತ್ತು ವರ್ಷದ ಹಿಂದೆ ಇದ್ದ ಪರಿಸರಕ್ಕೂ ಈಗ ಇರುವ ಪರಿಸರಕ್ಕೂ ಬಹಳಷ್ಟು ಬದಲಾವಣೆ ಇದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ಎಸ್. ಈಶ್ವರ ಪ್ರಸಾದ್ ಹೇಳಿದರು.

ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಚಿತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪರಿಸರ ಜಾಗೃತಿ ವಿಷಯದ ಬಗೆಗೆ ಮಾತನಾಡಿದರು.

ಪ್ರಕೃತಿಯನ್ನು ಉಳಿಸುವುದು ನಮ್ಮ ಕರ್ತವ್ಯ ಅಥವ ಜವಾಬ್ಧಾರಿಯಾಗಲಿ ಅಲ್ಲ ಎಂಬ ಭಾವನೆ ಅಣೇಕರಲ್ಲಿ ಒಡಮೂಡಿರುವುದು ದುದೈವ. ಹಾಗಾಗಿ  ಪ್ರಕೃತಿಯನ್ನು ಉಳಿಸಲು ಯಾರೊಬ್ಬರು ಮುಂದೆ ಬರುತ್ತಿಲ್ಲ. ನಮ್ಮಲ್ಲಿ ಪರಿಸರ ಬೆಳೆಸುವ ಬಗೆಗಿನ ಆಲೋಚನೆಗಳು ಬಹಳಷ್ಟಿವೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ರೂಪಿಸಿ ಜಾರಿಗೆ ತರುವುದು ತಿಳಿದಿಲ್ಲ. ಮರಗಿಡಗಳನ್ನು ಬೆಳೆಸಬೇಕೆಂದು ಇದ್ದ ಕಡೆಗಳೆಲ್ಲಾ ಗಿಡಗಳನ್ನು ನೆಟ್ಟರೆ ಕೆಲವೊಮ್ಮೆ ಪ್ರಕೃತಿಯು ಕೂಡ ಸ್ವೀಕರಿಸುವುದಿಲ್ಲ. ಆ ಕುರಿತು ಅರಿತು ವ್ಯವಹರಿಸಬೇಕು ಎಂದು ಹೇಳಿದರು.

ನಾವು ಸೇವಿಸುವ ನೀರು, ಆಮ್ಲಜನಕ, ಆಹಾರ ಎಲ್ಲವು ಪ್ರಕೃತಿಯ ಕೊಡುಗೆ. ಈ ಪ್ರಕೃತಿಯನ್ನು ಜತನದಿಂದ ಕಾಯುವುದು ನಮ್ಮೆಲ್ಲರ ಕರ್ತವ್ಯ. ನಿಸರ್ಗದಲ್ಲಿ ದೇವರನ್ನು ಕಾಣಬೇಕು. ಒಂದು ವೇಳೆ ಪ್ರಕೃತಿಯನ್ನು ಮರೆತರೆ  ಮನುಷ್ಯನ ಅಂತ್ಯ ಖಂಡಿತ ಎಂದು ಹೇಳಿದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಅರುಣ್, ದೀಪ್ತಿ, ಸೌಂದರ್ಯ, ಕಾರ್ತಿಕ್, ಶ್ರೀಧರ್ ಶೆಟ್ಟಿ, ಕಾರ್ತಿಕ್, ಸಂಕೇತ್, ಆಶಿಕಾ ಎಸ್, ಚರಿಷ್ಮಾ ತಮ್ಮ ಅನುಭವ ಹಂಚಿಕೊಂಡರು.

ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಉಪನ್ಯಾಸಕಿ ಭವ್ಯ ನಿಡ್ಪಳ್ಳಿ ಮತ್ತು ಕಾರ್ಯಕ್ರಮದ ಕಾರ್ಯದರ್ಶಿ ಮೇಘಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಕ್ಷಯ್ ಸ್ವಾಗತಿಸಿ, ಶರತ್ ವಂದಿಸಿ, ಪಲ್ಲವಿ ಕಾರ್ಯಕ್ರಮವನ್ನು ನಿರೂಪಿಸಿದರು.