ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾಂತ್ರೀಕರಣಕ್ಕೆ ಆದ್ಯತೆ : ಕೇಶವ ಮೂರ್ತಿ

ಪುತ್ತೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಯಾಂತ್ರೀಕರಣ ಇತ್ತೀಚೆಗಿನ ಕಾಲದ ಮಹತ್ತರವಾದ ಬೆಳವಣಿಗೆ. ಇದು ಸಮಯ ಮತ್ತು ವೆಚ್ಚಗಳ ಉಳಿತಾಯದ ಜತೆಗೆ ಗುಣಮಟ್ಟದ ತಂತ್ರಾಂಶಗಳ ತಯಾರಿಕೆಗೆ ಸಹಕಾರಿ ಎಂದು ಬೆಂಗಳೂರಿನ ಖಾಸಗಿ ಕಂಪೆನಿಯ ಪ್ರಾಜೆಕ್ಟ್ ಮ್ಯಾನೇಜರ್ ಕೇಶವಮೂರ್ತಿ ಹೇಳಿದರು.

        ಅವರು ಇಲ್ಲಿನ ವಿವೇಕಾನಂದ ಖಾಲೇಜಿನ .ಟಿ. ಕ್ಲಬ್ ವತಿಯಿಂದ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಫ್ಟ್ವೇರ್ ಅಟೊಮೇಶನ್ ಎಂಬ ವಿಷಯದ ಬಗೆಗೆ ಮಂಗಳವಾರ ಮಾತನಾಡಿದರು.

        ವಿದ್ಯಾರ್ಥಿ ದೆಸೆಯಿಂದಲೇ ಹೊಸ ಹೊಸ ತಂತ್ರಾಂಶಗಳನ್ನು ಹಾಗೂ ತಂತ್ರಜ್ಞಾನಗಳನ್ನು ಕಲಿಯುವುದು ಬಹಳ ಅಗತ್ಯ. ಇದರಿಂದಾಗಿ ಸಮಕಾಲೀನ .ಟಿ ಉದ್ಯಮದ ಹಿನ್ನಡೆ ಹಾಊ ಉದ್ಯೋಗ ನಷ್ಟದ ಭೀತಿಯಿಂದ ಪಾರಾಗಬಹುದು ಎಂದರಲ್ಲದೆ ಸಾಪ್ಟ್ವೇರ್ ಅಟೊಮೇಶನ್ ವಿವಿಧ ಮಜಲುಗಳನ್ನು ತೆರೆದಿಟ್ಟರು.

        ವೇದಿಕೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರಕಾಶ್ ಕುಮಾರ್, .ಟಿ. ಕ್ಲಬ್ ಸಂಚಾಲಕ ಸೂರ್ಯನಾರಾಯಣ ಉಪಸ್ಥಿತರಿದ್ದರು. .ಟಿ.ಕ್ಲಬ್ ಉಪಾಧ್ಯಕ್ಷ ನಿಶಾಂತ್ ಭಟ್ ಸ್ವಾಗತಿಸಿ ವಿದ್ಯಾಥಿನಿ ಭಾನುಪ್ರಿಯ ಕಾರ್ಯಕ್ರಮ ನಿರ್ವಹಿಸಿದರು.