ವಿವೇಕಾನಂದದಲ್ಲಿ ವಾಣಿಜ್ಯ ವಿಭಾಗದ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ

ಪುತ್ತೂರು: ಕಾಲೇಜಿನಲ್ಲಿ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಿದರೆ ಅದು ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ದಿ ಮಾಡಲು ಸಹಕಾರಿಯಾಗುತ್ತದೆ. ಅದರಿಂದ ವಿದ್ಯಾರ್ಥಿಗಳ ತಿಳುವಳಿಕೆಯನ್ನು ವೃದ್ದಿಸಲು ಮತ್ತು ವ್ಯಕ್ತಿತ್ವವನ್ನು ವಿಕಸಿಸಲು ದೀಪವಾಗುತ್ತದೆ ಎಂದು ವಿದ್ಯಾರಶ್ಮಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ ಸೀತಾರಾಮ ಕೇವಳ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ಸಂಘಗಳ ಆಶ್ರಯದಲ್ಲಿ ಆಯೋಜಿಸುತ್ತಿರುವ ಸರ್ಟಿಫಿಕೇಟ್ ಕೋರ್ಸು ಹಾಗೂ ಸಂಘಗಳ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಗುರುವಾರ ಮತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ತಿಳುವಳಿಕೆ ಎಂಬುವುದು  ಸದಾಕಾಲ ಮನುಷ್ಯನ ಜೊತೆಗೆ ಇರಬೇಕು. ಅದು ಮಾನವನಿಗೆ ತನ್ನ  ಕಷ್ಟದ ಸಂದರ್ಭದಲ್ಲಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ನುಡಿದರು.

ವಿಭಾಗ ಸಂಯೋಜಕರಾಧ ರವಿಕಲಾ ಮತ್ತು ರೇಖಾ ,  ವಾಣೀಜ್ಯ ಮತ್ತು ವ್ಯವಹಾರ ನಿರ್ವಹಣಾ ಸಂಘಗಳ  ಸಂಯೋಜಕರಾದ ವಿದ್ಯಾ ಹಾಗು ಅನ್ನಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟರಮಣ ಭಟ್ ಪ್ರಸ್ತಾವಿಸಿದರು. ವಾಣಿಜ್ಯ ಸಂಘದ ಅಧ್ಯಕ್ಷ ಜಿತೇಶ್ ರೈ ಸ್ವಾಗತಿಸಿ, ವಾಣಿಜ್ಯ ನಿರ್ವಹಣೆ ಸಂಘದ ಅಧ್ಯಕ್ಷ ರಮಾನಂದ ವಂದಿಸಿದರು.ವಿದ್ಯಾರ್ಥಿನಿ ಸಾಲ್ಯಾನ್ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.