ವಿವೇಕಾನಂದ ಕ್ಯಾಂಪಸ್ಗೆ ಗೋಯಾತ್ರೆ

ಪುತ್ತೂರು: ಇಲ್ಲಿನ ನೆಹರುನಗರದಲ್ಲಿನ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣಕ್ಕೆ ಶ್ರೀ ರಾಮಚಂದ್ರಾಪುರ ಮಠದಿಂದ ಆಯೋಜಿಸಲಾಗಿರುವ ಮಂಗಲ ಗೋಯಾತ್ರೆಯ ರಥ ಶುಕ್ರವಾರ ಆಗಮಿಸಿತು. ಸುಮಾರು ಮೂರು ಸಾವಿರದಷ್ಟು ಮಂದಿ ವಿದ್ಯಾಥಿಗಳು, ಪ್ರಾಧ್ಯಾಪಕರುಗಳು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಈ ರಥವನ್ನು ಸ್ವಾಗತಿಸಿದರು.

News Photo -Goyaathre 1

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಸಮಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಮತ್ತು ಗೋಹತ್ಯೆ ನಿಷೇಧಗೊಳ್ಳಬೇಕು. ಆಗ ಮಾತ್ರ ಸದೃಢ ಭಾರತ ಎದ್ದುನಿಲ್ಲುವುದಕ್ಕೆ ಸಾಧ್ಯ. ದೇಶದ ರಕ್ಷಣೆಯಾಗಬೇಕಾದರೆ ಗೋರಕ್ಷಣೆಯೂ ಆಗಬೇಕು. ಗೋವು ಕೇವಲ ಭಾವನಾತ್ಮಕವಾಗಿ ಮಾತ್ರ ಮುಖ್ಯವಾಗಿದೆಯಲ್ಲದೆ ವೈಜ್ಞಾನಿಕವಾಗಿಯೂ ದೇಸೀ ಗೋವುಗಳಿಗೆ ಇನ್ನಿಲ್ಲದ ಮಹತ್ವ ಇದೆ ಎಂಬುದನ್ನು ಅರಿಯಬೇಕು ಎಂದರು.

ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಹವ್ಯಕ ಸಮಾಜದ ಮುಖಂಡ ದತ್ತಾತ್ರೇಯ ಹೆಗಡೆ ಪಂಚಗವ್ಯದ ಪ್ರಾತ್ಯಕ್ಷಿಕೆ ಮಾಡಿದರು.