ವಿವೇಕಾನಂದದಲ್ಲಿ ಗಣಿತ ಶಾಸ್ತ್ರ ಎಂ.ಎಸ್ಸಿ ವಿಭಾಗ ಉದ್ಘಾಟನೆ

ಪುತ್ತೂರು : ಗಣಿತಶಾಸ್ತ್ರದಲ್ಲಿ ಮಹತ್ತವಾದ ಸಾಧನೆಯನ್ನು ಮಾಡುವ ಉದ್ದೇಶದ ಈಡೇರಿಕೆಗೆ ಸ್ನಾತಕೋತ್ತರ ಅಧ್ಯಯನ ವಿಭಾಗದ ಅವಶ್ಯಕತೆ ಇದೆ. ಗಣಿತ ಶಾಸ್ತ್ರ ಕಷ್ಟಕರ ಎಂಬ  ತಪ್ಪು ಕಲ್ಪನೆ ಅನೇಕರಲ್ಲಿ ಇದೆ. ಅವುಗಳನ್ನು ತೆಗೆದು ಹಾಕುವ ಕೆಲಸವನ್ನು ಮಾಡುಬೇಕಾದುದು ವಿದ್ಯಾರ್ಥಿಗಳು. ಸಾಧನೆಯ ಮೂಲಕ ಗಣಿತ ಶಾಸ್ತ್ರ ಎಷ್ಟು ಆಸಕ್ತಿದಾಯಕ ಎಂಬುದನ್ನು ನಿರೂಪಿಸಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ ತಿಳಿಸಿದರು.

ಅವರು ಕಾಲೇಜಿನಲ್ಲಿ ನೂತನವಾಗಿ ಆರಂಭಿಸಲಾದ ಸ್ನಾತಕೋತ್ತರ ಗಣಿತ ಶಾಸ್ತ್ರ ವಿಭಾಗವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಗಣಿತಶಾಸ್ತ್ರ ವಿಭಾಗವು ಆರಂಭಗೊಂಡಿರುವುದು ಸಂತೋಷದ ವಿಷಯ. ಉತ್ತಮ ಸಂಸ್ಥೆಯಲ್ಲಿ ಗುಣಮಟ್ಟಯುತವಾದ ಶಿಕ್ಷಣವನ್ನು ನೀಡಿದಾಗ ಶಿಕ್ಷಣಕ್ಕೆ ಹೆಚ್ಚು ಅರ್ಥ ಬರುತ್ತದೆ. ವಿವೇಕಾನಂದ ಕಾಲೇಜು ಉತ್ತಮ ಗುಣಮಟ್ಟದ ಅಧ್ಯಾಪಕರನ್ನು ಹೊಂದಿದೆ. ಅಂತೆಯೇ ಒಳ್ಳೆಯ ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕ ಎಂ.ಟಿ.ಜಯರಾಮ ಭಟ್, ಪದವಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರನಾರಾಯಣ ಭಟ್, ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ. ವಿಜಯ ಸರಸ್ವತಿ .ಬಿ ಉಪಸ್ಥಿತರಿದ್ದರು.

ಸ್ನಾತಕೋತ್ತರ ಗಣಿತಶಾಸ್ತ್ರ ಸಂಯೋಜಕಿ ವಿದ್ಯಾಸರಸ್ವತಿ ಸ್ವಾಗತಿಸಿ, ಉಪನ್ಯಾಸಕ ನೀತಿಶ್ ಕುಮಾರ್ ವಂದಿಸಿದರು. ಉಪನ್ಯಾಸಕಿ ಡಾ. ಮಾನಸ ಕಾರ್ಯಕ್ರಮ ನಿರೂಪಿಸಿದರು.