ವಾಜಪೇಯಿ ನಿಧನದಿಂದ ರಾಜಕೀಯ ರಂಗದ ಒಂದು ಯುಗಾಂತ್ಯ: ವಿಶ್ವೇಶ್ವರ ಭಟ್

ಪುತ್ತೂರು .   ನಮ್ಮ ದೇಶವಿಂದು ಅಮೂಲ್ಯ ರತ್ನವನ್ನು ಕಳೆದುಕೊಂಡು ರಾಜಕೀಯ ರಂಗದಲ್ಲಿ ಒಂದು ಯುಗವನ್ನು ಅಂತ್ಯಗೊಳಿಸಿಕೋಡಿದೆ. ಅಪ್ರತಿಮ ಜನನಾಯಕ ಮಾಜಿ ಪ್ರದಾನಿ  ಅಟಲ್‌ಜೀ ಅವರನ್ನು ಅಗಲಿ ಭರತಖಂಡವು ಭರಿಸಲಾಗದ ನೋವನ್ನು ಅನುಭವಿಸುತ್ತಿದೆ. ತನ್ನ ಮಾತಿನ ಪ್ರಖರತೆಯಿಂದ ಶತ್ರುಗಳನ್ನು ಮಿತ್ರರನ್ನಾಗಿಸುವ ಶಕ್ತಿ ಅಟಲ್‌ರದ್ದಾಗಿತು. ಅದೇ ರೀತಿ  ಸ್ನೇಹಪರ ವ್ಯಕ್ತಿತ್ವ  ಅವರದ್ದು ಎಂದು ರಾಜಕೀಯ ವಿಶ್ಲೇಷಕ ವಿಶ್ವೇಶ್ವರ ಭಟ್ ಬಂಗಾರಡ್ಕ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗು ರಾಷ್ಟ್ರೀಯ ಸೇವಾಯೋಜನೆ ಮತ್ತು ಅನ್ಯಾನ್ಯ ಸಂಘಗಳ ಆಶ್ರಯದಲ್ಲಿ ಆಯೋಜಿಸಲಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಹಜವಾಗಿ ಒಬ್ಬ ವ್ಯಕ್ತಿಯ ಪ್ರಭಾವವನ್ನು ಅವರ ಅಧಿಕಾರ ಅವಧಿಯಲ್ಲಿ ಮಾತ್ರ  ಕಾಣುತ್ತೇವೆ. ಆದರೆ ಅಟಲ್‌ಜೀ ಅವರ ವ್ಯಕ್ತಿತ್ವ ಅದೆಲ್ಲಕ್ಕಿಂತ ಬಿನ್ನ. ತನ್ನ ರಾಜಕೀಯ  ಬದುಕಿನ ನಿವೃತ್ತಿಯ ಬಳಿಕವು ಶ್ರೇಷ್ಟತೆಯ ಛಾಪನ್ನು ಉಳಿಸಿಕೊಂಡಿರುವುದು ಅವರ ಗುಣ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಅವರ ಅಂತಿಮ ದರ್ಶನದಲ್ಲಿ ತುಂಬಿಕೊಂಡ ಜನಸಾಗರ. ಸ್ನೇಹಹಸ್ತ ಚಾಚಿಕೊಂಡು ಬಂದರೆ ಯಾರಿಗೂ ಇಲ್ಲವೆನ್ನದೆ ಕೈಕುಲುಕುವ ಸ್ವಭಾವ ಅವರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಅಟಲ್ ಜೀ ಅವರು ಕವಿ ಹೃದಯವಂತಿಕೆ ಇದ್ದವರು ಹಾಗು ಉತ್ತಮ ವಾಗ್ಮಿಯೂ ಆಗಿ ಜನರ ಮನಸ್ಸು ಗೆದ್ದ ಜನನಾಯಕ. ತನ್ನ ಸೌಮ್ಯ ಸ್ವಭಾವದಿಂದ ದೃಡ ನಿರ್ದಾರ ತೆಗೆದುಕೊಳ್ಳುವ ಶಕ್ತಿ ಅವರಿಗಿತ್ತು. ರಾಜಕೀಯ ರಂಗದಲ್ಲಿ ಯಾರೊಂದಿಗೂ ವೈಯುಕ್ತಿಕವಾಗಿ  ದ್ವೇಷ ಮಾಡುವ ಗುಣ ಅವರಲ್ಲಿ ಇರಲಿಲ್ಲ.  ಹಾಗೆಯೇ ತನ್ನ ಅಧಿಕಾರದ ಅವಧಿಯಲ್ಲಿ ಸುವರ್ಣಚತುಷ್ಪತ ರಸ್ತೆಯನ್ನು ನಿರ್ಮಿಸಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಮಹತ್ತರ ಪಾತ್ರವಹಿಸಿದರು ಎಂದು ನುಡಿದರು.

ವಿದ್ಯಾರ್ಥಿ ಕ್ಷೇಮಪಾಲಕ ಪ್ರೊ.ಕೃಷ್ಣ ಕಾರಂತ ಉಪಸ್ಥತರಿದ್ದರು. ವಿದ್ಯಾರ್ಥಿನಿ ಸುಶ್ಮಿತ ಸ್ವಾಗತಿಸಿ. ವಿದ್ಯಾರ್ಥಿನಿ ಶೃತಿ ವಂದಿಸಿದರು.