ವೆಬ್ ಡೆವಲಪ್ಮೆಂಟ್ ಬಗ್ಗೆ ಉಪನ್ಯಾಸ

ಪುತ್ತೂರು: ದಿನಾಂಕ 8.8.18ರಂದು ವಿವೇಕಾನಂದ ಕಾಲೇಜಿನ  ಐಟಿ ಹಾಗೂ ಕಂಪ್ಯೂಟರ್ ವಿಭಾಗವು ’ವೆಬ್‌ಡೆವಲಪ್ ಮೆಂಟ್ ಲ್ಯಾಂಗ್ವೇಜಸ್ ಮತ್ತು ಟೂಲ್ಸ್’ ಎಂಬುದರ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ತೃತೀಯ ಬಿಸಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿತ್ತು.  ಶ್ರೀ ನಿಶಾಂತ್ ಭಟ್ ಪ್ರಸ್ತುತ ವಿಪ್ರೋದಲ್ಲಿ ಟ್ರೈನಿಯಾಗಿರುವ ಇವರು ತಮ್ಮ ಸ್ವಂತ ಅನುಭವದ ಮಾತುಗಳೊಂದಿಗೆ, ಮಾಹಿತಿಯನ್ನು ಹಂಚಿಕೊಂಡರು.

ವೆಬ್ ಅನ್ನುವುದು ಅಂತರ್ಜಾಲದ ಮೂಲಕ ಕಾರ್ಯಾಚರಿಸುವ ಒಂದು ವ್ಯವಸ್ಥೆ. ಸರ್ವರ್ ಎಂದು ಕರೆಯುವ ಯಂತ್ರದಲ್ಲಿ ಸಂಗ್ರಹವಾಗಿರುವ ವಿವಿಧ ಮಾಹಿತಿಯನ್ನು ನಿರ್ದಿಷ್ಟ ವೆಬ್ ವಿಳಾಸದ ಮೂಲಕ ಪ್ರಪಂಚದಾದ್ಯಂತ ತಲುಪಿಸುವ ವ್ಯವಸ್ಥೆಯಾಗಿದೆ. ಇದನ್ನೇ ಜಾಲತಾಣ ಅಥವಾ ವೆಬ್‌ಸೈಟ್ ಎಂದು ಕರೆಯುತ್ತೇವೆ.

ಕಂಪ್ಯೂಟರ್‌ನಲ್ಲಿ ಪ್ರೊಗ್ರಾಮರ್‌ಗಳು ಹೇಗೆ ಸೃಷ್ಟಿಸಲ್ಪಡುತ್ತಿವೆ ಎಂಬ ವಿಚಾರವಾಗಿ ಹೇಳುತ್ತಾ, ಮೊದಲಿಗೆ ವೆಬ್ ಅಪ್ಲಿಕೇಶನ್ ಎಂಬುದು ಫ್ರಂಟ್ ಎಂಡ್ ಮತ್ತು ಬ್ಯಾಕ್ ಎಂಡ್‌ಗಳ ಮಿಳಿತವಾಗಿದೆ. ಪ್ರಸ್ತುತ ಫ್ರಂಟ್ ಎಂಡ್‌ನ್ನು ’ಆಂಗ್ಯುಲರ್‌ಜೆಎಸ್, ಆರೆಲಿಯಾ ಜೆಎಸ್, ವಿವ್ ಜೆಎಸ್, ರಿಯಾಕ್ಟ್‌ಜೆಎಸ್, ಪಾಲಿಮರ್ ಜೆಎಸ್’ ಮುಂತಾದ ಸ್ಕ್ರಿಪ್ಟಿಂಗ್ ಭಾಷೆಗಳಲ್ಲಿ ತಯಾರಿಸಲಾಗುತ್ತಿದೆ. ಬ್ಯಾಕ್ ಎಂಡ್ ಅಂದರೆ ಸರ್‌ವರ್ ಸೈಡ್‌ನ್ನು ತಯಾರಿಸಲು ಜಾವಾ, ನೋಡ್ ಜೆಎಸ್, ಮೈಕ್ರೊ ಸಾಫ್ಟ್ ಡಾಟ್ ನೆಟ್, ಪಿಎಚ್‌ಪಿ, ಗ್ರೈಲ್ಸ್, ರೈಲ್ಸ್ ಎಂಬ ಭಾಷೆಗಳನ್ನೂ ಉಪಯೋಗಿಸಲಾಗುತ್ತಿದೆ. ಎಲ್ಲಾ ವಿಚಾರಗಳನ್ನು ಕ್ರೋಢೀಕರಿಸಿ ಉಳಿಸಲು ಡಾಟಾಬೇಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ಗಳಾದ ’ಒರಾಕಲ್, ಎಸ್‌ಕ್ಯೂಎಲ್ ಸರ್ವರ್, ಮೈಎಸ್‌ಕ್ಯೂಎಲ್, ಪೋಸ್ಟ್ ಗ್ರೇಎಸ್‌ಕ್ಯೂಎಲ್, ಮ್ಯಾಂಗೋ ಡಿಬಿ,ಎಸ್‌ಕ್ಯೂಎಲ್ ಲೈಟ್’ ಗಳನ್ನು ಪ್ರಸ್ತುತ ಉಪಯೋಗಿಸಲಾಗುತ್ತಿದೆ. ನಾವು ಕಾಲೇಜು ಜೀವನದಿಂದಲೇ ಇವುಗಳ ವಿಚಾರಗಳನ್ನು ತಿಳಿದುಕೊಳ್ಳುವುದು ಒಳಿತು ಎಂದು ಕಿವಿಮಾತು ಹೇಳಿದರು.

ಅಂತರ್ಜಾಲ ತಾಣಗಳನ್ನು ಸೃಷ್ಟಿಸಲು ಈಗಿರುವ ’ರೆಸ್ಟ್ ಎಪಿಐ’ ಬಗ್ಗೆ ಮಾತನಾಡುತ್ತಾ, ಪ್ರೊಟೋಕಾಲ್‌ನ ಗೆಟ್, ಪುಟ್, ಪೋಸ್ಟ್, ಪ್ಯಾಚ್ ಹಾಗೂ ಡಿಲೀಟ್ ಕೆಲಸಗಳನ್ನು ಮಾಡಲು ಸಲೀಸಾಗಿ ಟೂಲ್ಸ್‌ಗಳನ್ನು ನೀಡುತ್ತದೆ. ಸಿಪ್‌ಲ್ ಆಬ್‌ಜೆಕ್ಟ್‌ಆಕ್ಸೆಸ್ ಪೊಟೋಕಾಲ್‌ನ ಒಂದು ಉದಾಹರಣೆಯಾಗಿ ಜೆಸನ್ ಎಂಬ ಫಾರ್ಮಾಟ್ ವಿಚಾರವಾಗಿ ತಿಳಿಹೇಳಿದರು. ಈ ಎಪಿಐಯು ಭದ್ರತೆಯ ದೃಷ್ಟಿಯಿಂದ ತುಂಬಾ ಉಪಕಾರಿಯಾಗಿರುತ್ತದೆ ಎಂದು ಹೇಳುತ್ತಾ ತಾವು ಮಾಡಿದ ಒಂದು ಜಾಲತಾಣದ ಉದಾಹರಣೆಯಿಂದ ವಿದ್ಯಾರ್ಥಿಗಳಿಗೆ ಹೇಗೆ ತಂತ್ರಾಂಶಗಳ ವರ್ಗಾವಣೆಯಾಗುತ್ತದೆಎಂದು ವಿವರಿಸಿದರು. ತಮ್ಮ ಉದಾಹರಣೆಯಲ್ಲಿ ಗೆಟ್ ಮತ್ತು ಪೋಸ್ಟ್ ಮೆಥಡ್‌ಗಳನ್ನು ಹಾಕಿ ತಂತ್ರಾಂಶದ ಬದಲಾವಣೆಗಳನ್ನು ಹೇಳಿಕೊಟ್ಟರು.

ತೃತೀಯ ಬಿಸಿಎಯ ಭವಿಷ್ಯ ಎಸ್. ಕಾರ್ಯಕ್ರಮ ನಿರೂಪಿಸಿದರು.  ಅಶ್ವಿತ ಎಸ್. ಸ್ವಾಗತಿಸಿ, ಅಭಿಜಿತ್‌ರಾವ್ ವಂದಿಸಿದರು. ಐಟಿ ಕ್ಲಬ್ ಸಂಯೋಜಕರಾದ ಗುರುಕಿರಣ್, ಶ್ವೇತಲಕ್ಷ್ಮಿ ಹಾಗೂ ಐಟಿಕ್ಲಬ್ ಅಧ್ಯಕ್ಷ ವಿದ್ಯಾರ್ಥಿಅಭಿಜಿತ್ ಉಪಸ್ಥಿತರಿದ್ದರು. ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಪ್ರಕಾಶ್‌ಕುಮಾರ್, ವಿಭಾಗದ ಉಪನ್ಯಾಸಕ ವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.